ವಿಶ್ವಕಪ್ ಮಹಾಸಮರದಲ್ಲಿ ಟೀಂ ಇಂಡಿಯಾ-ಪಾಕ್ ಹೈ ವೋಲ್ಟೇಜ್ ಕದನದ ಬಗ್ಗೆ ಕೊಹ್ಲಿ ಹೇಳಿದ್ದೇನು?

ಪುಲ್ವಾಮಾ ಉಗ್ರ ದಾಳಿ ಬಳಿಕ ಪಾಕಿಸ್ತಾನದ ಜೊತೆ ವಿಶ್ವಕಪ್ ನಲ್ಲಿ ಆಡಬಾರದು ಎಂಬ ಕೂಗು ದೇಶಾದ್ಯಂತ ವ್ಯಾಪಕವಾಗಿತ್ತು. ಬಳಿಕ ಐಸಿಸಿ ಪಾಕ್ ವಿರುದ್ಧ ಪಂದ್ಯವನ್ನು ರದ್ದು ಮಾಡಲು ಸಾಧ್ಯವಿಲ್ಲ...
ವಿರಾಟ್ ಕೊಹ್ಲಿ-ಸರ್ಫರಾಜ್ ಖಾನ್
ವಿರಾಟ್ ಕೊಹ್ಲಿ-ಸರ್ಫರಾಜ್ ಖಾನ್
ನವದೆಹಲಿ: ಪುಲ್ವಾಮಾ ಉಗ್ರ ದಾಳಿ ಬಳಿಕ ಪಾಕಿಸ್ತಾನದ ಜೊತೆ ವಿಶ್ವಕಪ್ ನಲ್ಲಿ ಆಡಬಾರದು ಎಂಬ ಕೂಗು ದೇಶಾದ್ಯಂತ ವ್ಯಾಪಕವಾಗಿತ್ತು. ಬಳಿಕ ಐಸಿಸಿ ಪಾಕ್ ವಿರುದ್ಧ ಪಂದ್ಯವನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇದೀಗ ವಿಶ್ವಕಪ್ ಮಹಾಸಮರಕ್ಕೆ ದಿನಗಣನೆ ಆರಂಭವಾಗಿದ್ದು ಭಾರತ-ಪಾಕ್ ನಡುವಣ ಪಂದ್ಯಕ್ಕೆ ಇದೀಗ ವೇದಿಕೆ ಸಿದ್ಧಗೊಂಡಿದೆ. 
ಇಂಗ್ಲೆಂಡ್ ಮ್ಯಾಚೆಂಸ್ಟರ್ ನಲ್ಲಿ ಜೂನ್ 16ಕ್ಕೆ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಸೆಣೆಸಾಡಲಿದೆ. ಇನ್ನು ಪಾಕ್ ವಿರುದ್ಧ ಭಾರತ ಆಡಬಾರದು ಎಂಬ ಚರ್ಚೆಗಳು ನಡೆದಿತ್ತು. 
ಇದರಿಂದಾಗಿ ಇದೊಂದು ಹೈ ವೋಲ್ಟೆಜ್ ಪಂದ್ಯವಾಗಿದ್ದು ಅದನ್ನು ಹೇಗೆ ಎದುರು ನೋಡುತ್ತೀರಿ ಎಂಬು ಪ್ರಶ್ನಿಸಿದಾಗ ವಿರಾಟ್ ಕೊಹ್ಲಿ ಎಲ್ಲಾ ಪಂದ್ಯದಂತೆ ಇದು ಒಂದು ಪಂದ್ಯ ಅಷ್ಟೇ. ಈ ಪಂದ್ಯವನ್ನು ನಮ್ಮ ತಂಡ ಗೆಲ್ಲಲು ಬಯಸುತ್ತದೆ ಎಂದರು.
ಕ್ರೀಡಾಂಗಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾರತೀಯ ಅಭಿಮಾನಿಗಳು ಸೇರಿರುವುದರಿಂದ ವಾತಾವರಣವು ವಿಭಿನ್ನವಾಗಿರುತ್ತದೆ ಹೀಗಾಗಿ ನಮ್ಮ ಮೇಲೆ ಹೆಚ್ಚಿನ ಒತ್ತಡವಿರಲಿದೆ. ಆದರೆ ಒಮ್ಮೆ ಮೈದಾನಕ್ಕಿಳಿದ ಬಳಿಕ ಓರ್ವ ವೃತ್ತಿಪರ ಕ್ರಿಕೆಟಿಗನಾಗಿ ಪಂದ್ಯ ಗೆಲ್ಲಲು ಶ್ರೇಷ್ಠ ಪ್ರದರ್ಶನವನ್ನೇ ನೀಡಬೇಕಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com