ಬಾರ್ಡರ್ ಪ್ರಕಾರ ಈ ವಿಶ್ವಕಪ್ ನ ಬೆಸ್ಟ್ ಮೂರು ನಾಯಕರು ಯಾರು..?

ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ವಿರಾಟ್ ಕೊಹ್ಲಿ, ಇಂಗ್ಲೆಂಡ್ ತಂಡದ ಇಯಾನ್ ಮಾರ್ಗನ್ ಹಾಗೂ ಆಸ್ಟ್ರೇಲಿಯಾದ ಏರಾನ್ ಫಿಂಚ್ ಅವರು ಉತ್ತಮ ನಾಯಕರು ಎಂದು ತಂಡದ ಆಸೀಸ್ ಮಾಜಿ ನಾಯಕ ಅಲನ್ ಬಾರ್ಡರ್ ಎಂದು ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ,ಇಯಾನ್ ಮಾರ್ಗನ್ , ಏರಾನ್ ಫಿಂಚ್
ವಿರಾಟ್ ಕೊಹ್ಲಿ,ಇಯಾನ್ ಮಾರ್ಗನ್ , ಏರಾನ್ ಫಿಂಚ್
ಮೆಲ್ಬರ್ನ್: ಇಂಗ್ಲೆಂಡ್ ನಲ್ಲಿ ಮೇ 30 ರಿಂದ ಆರಂಭವಾಗಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ವಿರಾಟ್ ಕೊಹ್ಲಿ, ಇಂಗ್ಲೆಂಡ್ ತಂಡದ ಇಯಾನ್ ಮಾರ್ಗನ್ ಹಾಗೂ ಆಸ್ಟ್ರೇಲಿಯಾದ ಏರಾನ್ ಫಿಂಚ್ ಅವರು ಉತ್ತಮ ನಾಯಕರು ಎಂದು ತಂಡದ ಆಸೀಸ್ ಮಾಜಿ ನಾಯಕ ಅಲನ್ ಬಾರ್ಡರ್ ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ಆಟಗಾರ ಬಾರ್ಡರ್ ಅವರು 178 ಏಕದಿನ ಪಂದ್ಯಗಳನ್ನು ಆಡಿದ ದಿಗ್ಗಜ ಆಟಗಾರ. ಇವರು ಆಸೀಸ್ ತಂಡಕ್ಕೆ ಮೊದಲ ವಿಶ್ವಕಪ್ ಮುಕುಟ ತೊಡಿಸಿದ ಹಿರಿಮೆ ಹೊಂದಿದ್ದಾರೆ.
ವಿರಾಟ್ ಕೊಹ್ಲಿ ಆಕ್ರಮಣಕಾರಿ ನಡೆ ಇಯಾನ್ ಮಾರ್ಗನ್ ಹಾಗೂ ಏರಾನ್ ಫಿಂಚ್ ಅವರಿಗಿಂತ ಉತ್ತಮ ನಾಯಕ ಎಂದು ಬಿಂಬಿಸುತ್ತವೆ. ಆದರೆ ಅವರು, ವಿಭಿನ್ನ ತಂತ್ರಗಾರಿಕೆಯ ನಾಯಕ. ಅವರ ಹೆಗಲ ಮೇಲೆ ನಿರೀಕ್ಷೆಯ ಭಾರ ಇದೆ ಎಂದು ಬಾರ್ಡರ್ ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ ತಂಡ ಬಲಾಢ್ಯವಾಗಿದೆ. ಅವರು ತಮ್ಮ ತಂತ್ರಗಾರಿಕೆಯಿಂದಲೇ ಹೆಸರುವಾಸಿ. ಇವರ ತಂತ್ರಗಾರಿಕೆ ಹೇಗೆ ಈ ಬಾರಿಯ ವಿಶ್ವಕಪ್ ನಲ್ಲಿ ಅವರ ಕೈ ಹಿಡಿಯಲಿದೆ ಎಂಬುದನ್ನು ಕಾದು ನೋಡಬೇಕು. ಆತಿಥೇಯ ತಂಡ ಸದ್ಯ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು. ಈ ತಂಡ ಉಪಾಂತ್ಯದವರೆಗೆ ಸುಲಭವಾಗಿ ತಲುಪ ಬಲ್ಲದು ಎಂದು ಅವರು ಅಂದಾಜಿಸಿದ್ದಾರೆ.
ಕಳೆದ 12 ತಿಂಗಳಲ್ಲಿ ಕಂಡ ಏಳು ಬೀಳುಗಳಿಂದ ಪುಟಿದೆದ್ದಿರುವ ಆಸೀಸ್, ಏರಾನ್ ಫಿಂಚ್ ಅವರ ಮುಂದಾಳತ್ವದಲ್ಲಿ ಬಲಾಢ್ಯವಾಗಿದೆ. ಮೈದಾನದಲ್ಲಿ ಆಟಗಾರರೊಂದಿಗೆ ಅವರು ನಡೆದು ಕೊಳ್ಳುವ ರೀತಿ ಉತ್ತಮ.ವಿಶ್ವಕಪ್ ನಲ್ಲಿ ಆಸೀಸ್ ಚೇತೋಹಾರಿ ಪ್ರದರ್ಶನ ನೀಡಬಲ್ಲದು ಎಂದು ಬಾರ್ಡರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com