ಐಸಿಸಿ ಕ್ರಿಕೆಟ್ ವಿಶ್ವಕಪ್: ಅಭ್ಯಾಸ ಪಂದ್ಯದಲ್ಲೇ ಕ್ರಿಕೆಟ್ ಶಿಶು ಆಫ್ಘನ್ ವಿರುದ್ಧ ಮುಗ್ಗರಿಸಿದ ಪಾಕ್!

ಬಹು ನಿರೀಕ್ಷಿತ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿರುವ ಪಾಕಿಸ್ತಾನ ಕ್ರಿಕೆಟ್ ಶಿಶು ಆಫ್ಘಾನಿಸ್ತಾನದ ವಿರುದ್ಧ ಅಭ್ಯಾಸ ಪಂದ್ಯದಲ್ಲೇ ಮುಗ್ಗರಿಸಿದೆ.

Published: 25th May 2019 12:00 PM  |   Last Updated: 25th May 2019 12:18 PM   |  A+A-


ICC Cricket World Cup 2019 warm-up: Afghanistan upset Pakistan by 3 wickets

ಸಂಗ್ರಹ ಚಿತ್ರ

Posted By : SVN SVN
Source : Online Desk
ಲಂಡನ್: ಬಹು ನಿರೀಕ್ಷಿತ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿರುವ ಪಾಕಿಸ್ತಾನ ಕ್ರಿಕೆಟ್ ಶಿಶು ಆಫ್ಘಾನಿಸ್ತಾನದ ವಿರುದ್ಧ ಅಭ್ಯಾಸ ಪಂದ್ಯದಲ್ಲೇ ಮುಗ್ಗರಿಸಿದೆ.

ಇಂದು ನಡೆದ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ಆಫ್ಘಾನಿಸ್ತಾನದ ವಿರುದ್ಧ 3 ವಿಕೆಟ್ ಗಳ ಅಂತರದ ಸೋಲು ಕಂಡಿದೆ. ಬ್ರಿಸ್ಟೋಲ್ ನ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆದ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 263 ರನ್ ಗಳ ಸವಾಲಿನ ಗುರಿಯನ್ನು ಅಫ್ಘಾನಿಸ್ತಾನ 49.4 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ತಂಡ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಬಾಬರ್ ಅಜಂ ಅವರ ಅಮೋಘ ಶತಕದ ನೆರವಿನ ಹೊರತಾಗಿಯೂ 47.5 ಓವರ್ ಗಳಲ್ಲಿ 262 ರನ್ ಗಳಿಗೆ ಆಲೌಟ್ ಆಯಿತು.

ಪಾಕಿಸ್ತಾನಕ್ಕೆ ಆರಂಭಿಕ ಬ್ಯಾಟ್ಸ್ ಮನ್ ಇಮಾಮ್ ಉಲ್ ಹಕ್ (32 ರನ್), ಬಾಬರ್ ಅಜಂ (112 ರನ್) ಹಾಗೂ ಶೊಯೆಬ್ ಮಲ್ಲಿಕ್ (44 ರನ್) ಉತ್ತಮ ಬ್ಯಾಟಿಂಗ್ ಮೂಲಕ ಸವಾಲಿನ ಮೊತ್ತ ಪೇರಿಸಲು ನೆರವಾದರು. ಪಾಕಿಸ್ತಾನ ನೀಡಿದ 263 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಆಫ್ಘಾನಿಸ್ತಾನ ಹಷ್ಮತುಲ್ಲಾ ಶಾಹಿದ್ (ಅಜೇಯ 74 ರನ್) ಅವರ ಅಜೇಯ ಬ್ಯಾಟಿಂಗ್ ನೆರವಿನಿಂದಾಗಿ 49.4 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಆಫ್ಘಾನಿಸ್ತಾನಕ್ಕೆ ಮಧ್ಯಮ ಕ್ರಮಾಂಕದಲ್ಲಿ ಮೊಹಮದ್ ನಬಿ ಉತ್ತಮ ಸಾಥ್ ನೀಡಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ಆ ಮೂಲಕ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲೇ ಗೆಲುವು ಸಾಧಿಸಿ ತಾನೂ ಕೂಡ ಟೂರ್ನಿಯ ಕಠಿಣ ತಂಡ ಎಂಬುದನ್ನು ಸಾಬೀತು ಮಾಡಿದೆ.

ಆದರೆ ಮೊದಲ ಅಭ್ಯಾಸ ಪಂದ್ಯದಲ್ಲೇ ಸೋಲಿನ ಆರಂಭ ಕಂಡ ಪಾಕಿಸ್ತಾನ ನಿರಾಶೆ ಅನುಭವಿಸಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp