ಚೆಂಡು ವಿರೂಪದ ಬಗ್ಗೆ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗಪಡಿಸಿದ ಸ್ಪಿನ್ನರ್ ಮಾಂಟಿ ಪನೇಸರ್

ಸ್ಪಿನ್ ಮೋಡಿಗಾರ ಮಾಂಟಿ ಪನೇಸರ್ ಚೆಂಡು ವಿರೂಪದ ಬಗ್ಗೆ ಅಚ್ಚರಿಯ ಮಾಹಿತಿಯನ್ನು ಹೊರಹಾಕಿದ್ದು, ರಿವರ್ಸ್ ಸ್ಪಿನ್ ಗಾಗಿ ಚೆಂಡನ್ನು ವಿರೂಪಗೊಳಿಸಲು ಸನ್ ಸ್ಕ್ರೀನ್, ಮಿಂಟ್, ಝಿಪ್ ನ್ನು ಬಳಕೆ ಮಾಡುತ್ತಿದ್ದದ್ದಾಗಿ

Published: 25th May 2019 12:00 PM  |   Last Updated: 25th May 2019 06:30 AM   |  A+A-


Monty Panesar makes shocking ball-tampering claims

ಚೆಂಡು ವಿರೂಪದ ಬಗ್ಗೆ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗಪಡಿಸಿದ ಸ್ಪಿನ್ನರ್ ಮಾಂಟಿ ಪನೇಸರ್

Posted By : SBV SBV
Source : The New Indian Express
ಸ್ಪಿನ್ ಮೋಡಿಗಾರ ಮಾಂಟಿ ಪನೇಸರ್ ಚೆಂಡು ವಿರೂಪದ ಬಗ್ಗೆ ಅಚ್ಚರಿಯ ಮಾಹಿತಿಯನ್ನು ಹೊರಹಾಕಿದ್ದು, ರಿವರ್ಸ್ ಸ್ಪಿನ್ ಗಾಗಿ ಚೆಂಡನ್ನು ವಿರೂಪಗೊಳಿಸಲು ಸನ್ ಸ್ಕ್ರೀನ್, ಮಿಂಟ್, ಝಿಪ್ ನ್ನು ಬಳಕೆ ಮಾಡುತ್ತಿದ್ದದ್ದಾಗಿ ಹೇಳಿದ್ದಾರೆ. 

ದಿ ಫುಲ್ ಮಾಂಟಿ ಸುದ್ದಿಯಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿರುವ ಸ್ಪಿನ್ನರ್ ಮಾಂಟಿ ಪನೇಸರ್, ಜೇಮ್ಸ್ ಆಂಡ್ರೆಸನ್ ನ ಮಾದರಿಯ ಪ್ರಕಾರವಾಗಿ ಚೆಂಡನ್ನು ಆದಷ್ಟೂ ಶುಷ್ಕವಾಗಿಡುತ್ತಿದ್ದದ್ದಾಗಿ ತಿಳಿಸಿದ್ದಾರೆ. 

ನಾವು ಕಾನೂನನ್ನು ಉಲ್ಲಂಘನೆ ಮಾಡಿದ್ದೇವೆಯೇ ಎಂಬುದು ಅದನ್ನು ವ್ಯಾಖ್ಯಾನಿಸುವುದರ ಮೇಲೆ ಅವಲಂಬನೆಯಾಗಿರುತ್ತದೆ. ಸಲೈವಾ ಮೇಲೆ ಸನ್ ಕ್ರೀಮ್ ಹಾಗೂ ಮಿಂಟ್ ಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಕೊಂಡಿದ್ದೆವು. ಇವು ರಿವರ್ಸ್ ಸ್ವಿಂಗ್ ಗೆ ಸಹಕಾರಿಯಾಗುತ್ತಿತ್ತು ಎಂದು ಮಾಂಟಿ ಹೇಳಿದ್ದಾರೆ. 

ರಿವರ್ಸ್ ಸ್ವಿಂಗ್ ಹೆಚ್ಚು ಪರಿಣಾಮ ಬೀರುತ್ತಿತ್ತು ಆದ್ದರಿಂದ ನಾವು ಚೆಂಡನ್ನು ವಿರೂಪಗೊಳಿಸಲು ಯತ್ನಿಸುತ್ತಿದ್ದೆವು, ನಾನು ಇಂಗ್ಲೆಂಡ್ ಗೆ ಬಂದಾಗ ಚೆಂಡನ್ನು ಸೀಮರ್ಸ್‌ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಡುವುದು ನನ್ನ ಕೆಲಸವಾಗಿತ್ತು ಎಂದು ಮಾಂಟಿ ಪನೇಸರ್ ಹೇಳಿಕೊಂಡಿದ್ದಾರೆ. 
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp