'ಧೋನಿ ಈಸ್ ಫಿಟ್ ಅಂಡ್ ಫೈನ್': ನಿವೃತ್ತಿ ಅವರಿಷ್ಟ: ಎಂಎಸ್ ಡಿ ಗೆ ಶೇನ್ ವಾರ್ನ್ ಸಪೋರ್ಟ್!

ವಯಸ್ಸಿನ ಕಾರಣ ನೀಡಿ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿ ಕುರಿತು ಚರ್ಚೆ ನಡೆಸುವ ಮೂಲಕ ಅವರಿಗೆ ಮುಜುಗರವನ್ನುಂಟು ಮಾಡುತ್ತಿರುವ ಟೀಕಾಕಾರರಿಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ತಮ್ಮದೇ ಶೈಲಿಯಲ್ಲಿ ಭರ್ಜರಿ ತಿರುಗೇಟು ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ವಯಸ್ಸಿನ ಕಾರಣ ನೀಡಿ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿ ಕುರಿತು ಚರ್ಚೆ ನಡೆಸುವ ಮೂಲಕ ಅವರಿಗೆ ಮುಜುಗರವನ್ನುಂಟು ಮಾಡುತ್ತಿರುವ ಟೀಕಾಕಾರರಿಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ತಮ್ಮದೇ ಶೈಲಿಯಲ್ಲಿ ಭರ್ಜರಿ ತಿರುಗೇಟು ನೀಡಿದ್ದಾರೆ.
ಕ್ರೀಡಾ ಮಾಧ್ಯಮದೊಂದಿಗೆ ಮಾತನಾಡಿರುವ ಶೇನ್ ವಾರ್ನ್ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಕುರಿತಂತೆ ಭುಗಿಲೆದ್ದಿರುವ ಚರ್ಚೆಗೆ ವಿರೋಧ ವ್ಯಕ್ತಪಡಿಸಿದರು. ಈ ಕುರಿತು ಮಾತನಾಡಿದ ವಾರ್ನ್, 'ಹಾಲಿ ಐಸಿಸಿ ವಿಶ್ವಕಪ್‍ ಟೂರ್ನಿಯಲ್ಲಿ ಮಹೇಂದ್ರ ಸಿಂಗ್‍ ಧೋನಿ ಅವರು ಭಾರತ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಎಂ.ಎಸ್ ಧೋನಿ ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿದ್ದಾರೆ. ಭಾರತ  ಕ್ರಿಕೆಟ್‌ಗೆ ಅಗತ್ಯವಿರುವ ಎಲ್ಲದನ್ನು ಅವರು ನೀಡಿದ್ದಾರೆ. ವಿಶ್ವಕಪ್ ಕ್ರಿಕೆಟ್  ತಂಡದಲ್ಲಿ ಧೋನಿ ಇರಬಾರದಿತ್ತು ಎನ್ನುವ ಕೆಲವರ ಮಾತನ್ನು ನಾನು ಒಪ್ಪುವುದಿಲ್ಲ. ಹಾಗೆ  ಹೇಳಲೂ ಬಾರದು ಎಂದು ಹೇಳಿದ್ದಾರೆ.
ಅಂತೆಯೇ ಧೋನಿಗೆ ಯಾಕೆ ನೀವಿನ್ನೂ ನಿವೃತ್ತಿ  ಕೊಟ್ಟಿಲ್ಲ ಎಂದು ಪ್ರಶ್ನಿಸುವ ಬದಲು ಯಾಕೆ ನೀವಿನ್ನೂ ಭಾರತ ತಂಡಕ್ಕೆ ಆಡುತ್ತಿದ್ದೀರಿ  ಎಂದು ಕೇಳುವುದು ಉತ್ತಮ ಎಂದು ಹೇಳುವ ಮೂಲಕ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. 
ಅಂತೆಯೇ 'ಒಬ್ಬ  ಆಟಗಾರನಾಗಿ ಎಲ್ಲರಿಗೂ ಗೊತ್ತಿರುವಂತೆ ಧೋನಿಗೆ ತಾನು ನಿವೃತ್ತಿ ನೀಡಲು ಸಕಾಲ ಯಾವುದು  ಎಂಬುದು ಚೆನ್ನಾಗೇ ತಿಳಿದಿದೆ. ಅವರು ಯಾವಾಗ ಬಯಸುತ್ತಾರೋ ಆಗ ಅವರು ನಿವೃತ್ತಿ  ಕೊಡುತ್ತಾರೆ. ನಿಮಗ್ಯಾಕೆ ಇಲ್ಲದ ಉಸಾಬರಿ?'' ಎಂದು ಶೇನ್ ವಾರ್ನ್‌ ಕಿಡಿಕಾರಿದ್ದಾರೆ. 
2018 ನಿರಾಶಾದಾಯಕ ಪ್ರದರ್ಶನದ ಬಳಿಕ 2019ರಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿರುವ ಧೋನಿ, 2019ರಲ್ಲಿ ಈ ವರೆಗೂ 9 ಪಂದ್ಯಗಳನ್ನಾಡಿದ್ದಾರೆ. ಈ ಪೈಕಿ ಭರ್ಜರಿ 81.75ರ ಸರಾಸರಿಯಲ್ಲಿ 327 ರನ್ ಭಾರಿಸಿದ್ದಾರೆ. ಈ ಪೈಕಿ ಅವರ ಗರಿಷ್ಠ ವೈಯುಕ್ತಿಕ ಸ್ಕೋರ್ ಅಜೇಯ 87ರನ್. ಇದಲ್ಲದೇ ಐಪಿಎಲ್ ನಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ್ದ ಧೋನಿ, ತಮ್ಮ ತಂಡವನ್ನುಫೈನಲ್ ವರೆಗೂ ಕರೆದುಕೊಂಡು ಹೋಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com