ಐಸಿಸಿ ವಿಶ್ವಕಪ್‌ಗೂ ಮೀಟೂ ಎಫೆಕ್ಟ್: ಲೈಂಗಿಕ ಕಿರುಕುಳ ವಿರುದ್ಧ ಆಟಗಾರರಿಗೆ ಐಸಿಸಿ ಎಚ್ಚರಿಕೆ

ಕಳೆದ ವರ್ಷ ಜಗತ್ತಿನಾದ್ಯಂತ ಹರಡಿದ್ದ ಮೀಟೂ ಚಳುವಳಿ ಇದೀಗ ವಿಶ್ವ ಕ್ರಿಕೆಟ್‌ಗೂ ತಟ್ಟಿದ್ದು, ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ ಆಟಗಾರರು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಂಡನ್ :ಕಳೆದ ವರ್ಷ ಜಗತ್ತಿನಾದ್ಯಂತ ಹರಡಿದ್ದ ಮೀಟೂ ಚಳುವಳಿ ಇದೀಗ ವಿಶ್ವ ಕ್ರಿಕೆಟ್‌ಗೂ ತಟ್ಟಿದ್ದು, ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ ಆಟಗಾರರು ಸೇರಿದಂತೆ ಎಲ್ಲ ಅಧಿಕಾರಿ ಸಿಬ್ಬಂದಿ ಲೈಂಗಿಕ ಕಿರುಕುಳದಂತಹ ಪ್ರಕರಣಗಳಿಂದ ದೂರ ಉಳಿಯುವಂತೆ ಐಸಿಸಿ ಎಚ್ಚರಿಕೆ ನೀಡಿದೆ. 
ಮೀಟೂ ಚಳುವಳಿ ಆರಂಭವಾದ ಬಳಿಕ ಮೊದಲ ಬಾರಿ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಆಟಗಾರರು, ಮಾಧ್ಯಮದವರು, ಸಿಬ್ಬಂದಿ, ಅಧಿಕಾರಿಗಳು, ಪ್ರಾಯೋಜಕರು ಸೇರಿದಂತೆ ಹಲವರು ವಿವಿಧ ಆಯಾಮಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಹಾಗಾಗಿ, ಈ ವೇಳೆ ಯಾವುದೇ ರೀತಿಯ ಲೈಂಗಿಕ ಕಿರುಕುಳದಂತ ಪ್ರಕರಣಗಳು ನಡೆಯದಂತೆ ಎಲ್ಲರೂ ಎಚ್ಚರ ವಹಿಸಬೇಕೆಂದು ಐಸಿಸಿ ಕಾರ್ಯತಂತ್ರ ಸಂವಹನ ಪ್ರಧಾನ ವ್ಯವಸ್ಥಾಪಕ ಕ್ಲೈರ್‌ ಫರ್ಲಾಂಗ್‌ ಸೂಚಿಸಿದ್ದಾರೆ. 
ವಿಶ್ವಕಪ್‌ ಟೂರ್ನಿಯಲ್ಲಿ ಕಾರ್ಯನಿರ್ವಹಿಸುವ ಯಾರೇ ಆಗಲಿ ಲೈಂಗಿಕ ಕಿರುಕಳದಂಥ ಪ್ರಕರಣದಲ್ಲಿ ಭಾಗಿಯಾಗುವ ಆರೋಪ ಕಂಡುಬಂದಲ್ಲಿ ಅವರನ್ನು ತಕ್ಷಣ ಹೊರ ಹಾಕಲಾಗುವುದು. ಅಲ್ಲದೇ, ಯಾವುದೇ ವ್ಯಕ್ತಿಯ ಮೇಲೆ ತಾರತಮ್ಯ, ಬೆದರಿಕೆ, ಹಲ್ಲೆ, ಪ್ರಚೋದನಕಾರಿ ಹೇಳೀಕೆ ಸೇರಿದಂತೆ ಇನ್ನಿತರ ಅಸಭ್ಯ ವರ್ತನೆಗಳು ಕಂಡುಬಂದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com