ಟಿ20 ಸರಣಿ: ವಿಷಕಾರಿ ಗಾಳಿಯಲ್ಲಿ ಟೀಂ ಇಂಡಿಯಾ ಯುವಪಡೆಗೆ ಬಾಂಗ್ಲಾ ಸವಾಲು

ಕೆಲ ಹಿರಿಯ ಆಟಗಾರರ ಜತೆಗೆ ಬಹುತೇಕ ಯುವ ಆಟಗಾರರನ್ನು ಒಳಗೊಂಡಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಟಿ-20 ಸರಣಿಯ ಮೊದಲನೇ ಹಣಾಹಣಿಯಲ್ಲಿ ನಾಳೆ ಬಾಂಗ್ಲಾದೇಶ ತಂಡವನ್ನು ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಎದುರಿಸಲು ಸಿದ್ಧವಾಗಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ

ನವದೆಹಲಿ: ಕೆಲ ಹಿರಿಯ ಆಟಗಾರರ ಜತೆಗೆ ಬಹುತೇಕ ಯುವ ಆಟಗಾರರನ್ನು ಒಳಗೊಂಡಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಟಿ-20 ಸರಣಿಯ ಮೊದಲನೇ ಹಣಾಹಣಿಯಲ್ಲಿ ನಾಳೆ ಬಾಂಗ್ಲಾದೇಶ ತಂಡವನ್ನು ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಎದುರಿಸಲು ಸಿದ್ಧವಾಗಿದೆ.

ಕಳೆದ ಎರಡು ದಿನಗಳ ಹಿಂದೆ ಇಲ್ಲಿಗೆ ಉಭಯ ತಂಡಗಳು ಆಗಮಿಸಿದ್ದವು. ದೀಪಾವಳಿ ಹಬ್ಬದ ಪ್ರಯುಕ್ತ ದೆಹಲಿಯ ವಾತವರಣ ಸಂಪೂರ್ಣ ಹದಗೆಟ್ಟಿದ್ದು, ಪಂದ್ಯವನ್ನು ಬೇರೆಡೆ ಸ್ಥಳಾಂತರ ಮಾಡಬೇಕೆಂದು ಒತ್ತಡ ಕೇಳಿ ಬಂದಿತ್ತು. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೆಲ ಸಮಸ್ಯೆಗಳಿಂದ ಪಂದ್ಯವನ್ನು ಸ್ಥಳಾಂತರ ಮಾಡುವ ನಿರ್ಧಾರವನ್ನು ಕೊನೆಯ ಕ್ಷಣದಲ್ಲಿ ಕೈ ಬಿಟ್ಟಿತ್ತು.

ರಾಜಧಾನಿಯ ವಾಯು ಗುಣಮಟ್ಟ ಕಲುಷಿತಗೊಂಡಿರುವ ಕಾರಣ ಬಾಂಗ್ಲಾ ಆಟಗಾರರು ಮಾಸ್ಕ್‌ ಗಳನ್ನು ಹಾಕಿಕೊಂಡು ಅಭ್ಯಾಸ ನಡೆಸಿದ್ದರು. ಬಾಂಗ್ಲಾ ತಂಡ ಈ ಸರಣಿ ಆರಂಭ ಮುನ್ನವೇ ಶಕೀಬ್ ಅಲ್ ಹಸನ್ ಅವರನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ. ಇದು ತಂಡದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com