ಅಲ್ಪ ಮೊತ್ತಕ್ಕೆ ಔಟಾದ್ರೂ ಕೊಹ್ಲಿ, ಎಂಎಸ್ ಧೋನಿ ದಾಖಲೆ ಮುರಿದು ಇತಿಹಾಸ ನಿರ್ಮಿಸಿದ ರೋ'ಹಿಟ್' ಶರ್ಮಾ!

ಭರ್ಜರಿ ಫಾರ್ಮ್ ನಲ್ಲಿರುವ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧ ಕೇವಲ 9 ರನ್ ಗಳಿಗೆ ಔಟ್ ಆದರೂ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿಯ ದಾಖಲೆಯನ್ನು ಮುರಿದಿದ್ದಾರೆ.
ಎಂಎಸ್ ಧೋನಿ-ರೋಹಿತ್-ಕೊಹ್ಲಿ
ಎಂಎಸ್ ಧೋನಿ-ರೋಹಿತ್-ಕೊಹ್ಲಿ

ನವದೆಹಲಿ: ಭರ್ಜರಿ ಫಾರ್ಮ್ ನಲ್ಲಿರುವ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧ ಕೇವಲ 9 ರನ್ ಗಳಿಗೆ ಔಟ್ ಆದರೂ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿಯ ದಾಖಲೆಯನ್ನು ಮುರಿದಿದ್ದಾರೆ.

ಹೌದು.. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟಿ-20 ಪಂದ್ಯ ನಡೆಯುತ್ತಿದೆ.. ಈ ಪಂದ್ಯ ನಾಯಕ ರೋಹಿತ್ ಶರ್ಮಾ ಪಾಲಿಗೆ ಸಾಕಷ್ಟು ಪ್ರಮುಖವಾಗಿತ್ತು. ಆದರೆ ರೋಹಿತ್ ಅಲ್ಪ ಮೊತ್ತಕ್ಕೆ ಔಟಾಗಿದ್ದರು. 9 ರನ್ ಗಳಿಸಿದ್ದ ಶಫಿಯೂಲ್ ಇಸ್ಲಾಂ ಎಲ್ ಬಿಡಬ್ಲ್ಯೂ ಔಟ್ ಮಾಡಿದರು. ಆದರೆ ಕೊಹ್ಲಿಯ ದಾಖಲೆ ಮುರಿಯಲು ರೋಹಿತ್ ಶರ್ಮಾಗೆ ಬೇಕಿದಿದ್ದು 8 ರನ್ ಮಾತ್ರ. ಈ ಮೂಲಕ ಕೊಹ್ಲಿಯ ದಾಖಲೆಯನ್ನು ಮುರಿದಿದ್ದು ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಬಾರಿಸಿದ ಆಟಗಾರ ಅನ್ನೋ ಹಿರಿಮೆಗೆ ರೋಹಿತ್ ಶರ್ಮಾ ಪಾತ್ರವಾಗಲಿದ್ದಾರೆ. 

ಇದೇ ವೇಳೆ ಸ್ವದೇಶಿ ನೆಲದಲ್ಲಿ 99 ಪಂದ್ಯಗಳನ್ನು ಆಡುವ ಮೂಲಕ ಅತೀ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆ ಮಾಡಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ 98 ಪಂದ್ಯಗಳನ್ನು ಸ್ವದೇಶಿ ನೆಲದಲ್ಲಿ ಆಡಿದ್ದಾರೆ. 

ಸದ್ಯ 67 ಟಿ-20 ಇನ್ನಿಂಗ್ಸ್​ ಆಡಿರುವ ವಿರಾಟ್​ ಕೊಹ್ಲಿ 2,450 ರನ್ ​ಗಳನ್ನು ಸಿಡಿಸಿ ಅತಿಹೆಚ್ಚು ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದರು. ಈ ಪಟ್ಟಿಯಲ್ಲಿ ರೋಹಿತ್ 2 ನೇ ಸ್ಥಾನದಲ್ಲಿದ್ದು, ರೋಹಿತ್ ಮೂಲಕ 2,452 ರನ್​ ಕಲೆಹಾಕಿ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ಇನ್ನು 2,285 ರನ್ ಗಳಿಸಿರುವ ನ್ಯೂಜಿಲೆಂಡ್ ನ ಮಾರ್ಟಿನ್ ಗಪ್ಟಿಲ್ 3 ಮತ್ತು 2,263 ರನ್ ಗಳಿಸಿರುವ ಪಾಕಿಸ್ತಾನದ ಶೊಯೆಬ್ ಮಲ್ಲಿಕ್ 4ನೇ ಸ್ಥಾನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com