ಲೆ ಲೆ ಲೇ, ಪಂತ್ ಗೆ ಕೈ ತೋರಿಸಿ ಹಣೆ ಹಣೆ ಚಚ್ಚಿಕೊಂಡ ರೋಹಿತ್ ಶರ್ಮಾ, ವಿಡಿಯೋ ವೈರಲ್!

ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಗೆ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ ಯುವ ಕ್ರಿಕೆಟಿಗ, ಕೀಪರ್ ರಿಷಬ್ ಪಂತ್ ಗೆ ಕೈ ತೋರಿಸಿ ಹಣೆ ಹಣೆ ಚಚ್ಚಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ರಿಷಬ್ ಪಂತ್-ರೋಹಿತ್ ಶರ್ಮಾ
ರಿಷಬ್ ಪಂತ್-ರೋಹಿತ್ ಶರ್ಮಾ

ನವದೆಹಲಿ: ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಗೆ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ ಯುವ ಕ್ರಿಕೆಟಿಗ, ಕೀಪರ್ ರಿಷಬ್ ಪಂತ್ ಗೆ ಕೈ ತೋರಿಸಿ ಹಣೆ ಹಣೆ ಚಚ್ಚಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. 

ಬಾಂಗ್ಲಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳಿಂದ ಸೋಲು ಅನುಭವಿಸಿದೆ. ಇನ್ನು ಪಂದ್ಯದಲ್ಲಿ ಇಲ್ಲದ ಡಿಆರ್ಎಸ್ ಅನ್ನು ತೆಗೆದುಕೊಳ್ಳುವಂತೆ ಒಪ್ಪಿಸಿ ಕೊನೆಗೆ ಡಿಆರ್ಎಸ್ ಅವಕಾಶವನ್ನು ಕಳೆದುಕೊಂಡ ಬೇಸರದಲ್ಲಿ ರೋಹಿತ್ ಶರ್ಮಾ ಪಂತ್ ರ ಬಳಿ ಬಂದು ಕೈ ತೋರಿಸಿ ಹಣೆ ಚಚ್ಚಿಕೊಂಡರು. 

ಒಂದೇ ಓವರ್ ನಲ್ಲಿ ಮೂರು ಪ್ರಮಾದಗಳನ್ನು ಎಸಗಿ ತಂಡದ ಸೋಲಿಗೆ ಪಂತ್ ಕಾರಣರಾದರೂ  ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಜುವೇಂದ್ರ ಚಾಹಲ್ ಅವರ ಒವರ್ ನಲ್ಲಿ ಎರಡು ಬಾರಿ ಎಲ್ ಬಿಡಬ್ಲ್ಯೂಗಾಗಿ ಡಿಆರ್ ಎಸ್ ಮನವಿ ಪಡೆಯುವ ಅವಕಾಶವಿದ್ದರೂ ರಿಷಭ್ ಪಂತ್ ಅದನ್ನು ಪಡೆಯಲಿಲ್ಲ. ಅದೇ ಓವರ್ ನ ಅಂತಿಮ ಎಸೆತದಲ್ಲಿ ಬಾಲ್ ಬ್ಯಾಟಿಗೆ ತಾಗದಿದ್ದರೂ ಮನವಿ ಮಾಡುವ ಮೂಲಕ ಮಹತ್ವದ ಡಿಆರ್ ಎಸ್ ಕಳೆದುಕೊಂಡಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com