ಮಹಿಳಾ ಕ್ರಿಕೆಟ್ ನಲ್ಲಿ ಸ್ಮೃತಿ ಮತ್ತೊಂದು ಮೈಲಿಗಲ್ಲು! ಏಕದಿನದಲ್ಲಿ ಅತಿ ವೇಗದ 2,000 ರನ್ ಪೂರೈಸಿ ದಾಖಲೆ

ಏಕದಿನ ಪಂದ್ಯಗಳಲ್ಲಿ 2,000 ರನ್ ಗಳಿಸಿದ ಎರಡನೇ ಅತಿ ವೇಗದ ಭಾರತೀಯ ಆಟಗಾರ್ತಿಎಂಬ ಹೆಗ್ಗಳಿಕೆಗೆ ಟೀಂ ಇಂಡಿಯಾ ಮಹಿಳಾ ತಂಡದ ಸ್ಟಾರ್ ಬ್ಯಾಟ್ಸ್‌ವುಮನ್  ಸ್ಮೃತಿ ಮಂಧಾನಾ ಪಾತ್ರರಾಗಿದ್ದಾರೆ 
ಸ್ಮೃತಿ ಮಂಧಾನಾ
ಸ್ಮೃತಿ ಮಂಧಾನಾ

ಆಂಟಿಗುವಾ: ಏಕದಿನ ಪಂದ್ಯಗಳಲ್ಲಿ 2,000 ರನ್ ಗಳಿಸಿದ ಎರಡನೇ ಅತಿ ವೇಗದ ಭಾರತೀಯ ಆಟಗಾರ್ತಿಎಂಬ ಹೆಗ್ಗಳಿಕೆಗೆ ಟೀಂ ಇಂಡಿಯಾ ಮಹಿಳಾ ತಂಡದ ಸ್ಟಾರ್ ಬ್ಯಾಟ್ಸ್‌ವುಮನ್  ಸ್ಮೃತಿ ಮಂಧಾನಾ ಪಾತ್ರರಾಗಿದ್ದಾರೆ 

ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಎಡಗೈ ಬ್ಯಾಟರ್ ಈ ಸಾಧನೆ ಮಾಡಿದ್ದು ಮಂಧಾನಾ ಅವರ ಯಶಸ್ಸಿನ ಕಿರೀತಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಆರು ವಿಕೆಟ್‌ಗಳಿಂದ ಜಯಗಳಿಸಿತು.

ಮಂಧಾನಾ 74 ರನ್‌ಗಳ ಸಿಡಿಸಿದ್ದರೆ ಜೆಮಿಮಾ ರೊಡ್ರಿಗಸ್ ಅವರೊಂದಿಗೆ 141 ರನ್‌ಗಳ ಆರಂಭಿಕ ಜತೆಯಾಟ ನಿಡಿದ್ದರು. ಭಾರತೀಯ ವನಿತೆಯರ ಪಡೆ ವೆಸ್ಟ್ ಇಂಡೀಸ್ ನಿಡಿದ್ದ 195 ರನ್ ಗುರಿಯನ್ನು ಬೆನ್ನತ್ತಿ ಸುಲಭದಲ್ಲಿ ಜಯ ಸಾಧಿಸಿದ್ದು  ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1ರಿಂದ ಗೆದ್ದುಕೊಂಡಿತು.

23 ವರ್ಷದ ಮಂಧಾನಾ  51 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡು 2,000 ಏಕದಿನ ರನ್  ಗುರಿ ತಲುಪಿದ್ದಾರೆ. ಈ ಮೂಲಕ ಬೆಲಿಂಡಾ ಕ್ಲಾರ್ಕ್ ಮತ್ತು ಮೆಗ್ ಲ್ಯಾನಿಂಗ್  ಅವರ ನ್ಬಂತರದ ಸ್ಥಾನ ಅಲಂಕರಿಸಿದ್ದಾರೆ. ಮಂಧಾನಾ ಈವರೆಗೆ 51 ಏಕದಿನ ಪಂದ್ಯಗಳಲ್ಲಿ 43.08 ಸರಾಸರಿಯಲ್ಲಿ 2,025 ರನ್ ಗಳಿಸಿದ್ದಾರೆ.ವೃತ್ತಿಜೀವನದಲ್ಲಿ ಇವರು ಇದುವರೆಗೆ ನಾಲ್ಕು ಏಕದಿನ  ಶತಕಗಳು ಮತ್ತು 17 ಅರ್ಧಶತಕಗಳನ್ನು ಗಳಿಸಿದ್ದಾರೆ.

50 ಓವರ್‌ಗಳ ಕ್ರಿಕೆಟ್‌ನಲ್ಲಿ ದಾಖಲೆ ರನ್ ಗಳಿಸಿದ ಏಕೈಕ ಭಾರತೀಯ ಶಿಖರ್ ಧವನ್. ಅವರು 48 ಇನ್ನಿಂಗ್‌ಗಳಲ್ಲಿ ಈ ಸಾಧನೆ ಮಾಡಿದ್ದರು.ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ ಈ ಸಾಧನೆ ಮಾಡಿದ ಜಗತ್ತಿನ ಅತಿವೇಗದ ಮಹಿಳಾ ಆಟಗಾರನಾಗಿದ್ದಾರೆ.  ಅವರು 41 ಇನ್ನಿಂಗ್ಸ್ ನಲ್ಲಿ  2,000 ಏಕದಿನ ರನ್ ಗಳಿಸಿದ್ದರು. ಅದೇ ತಂಡದ ಸಹ ಆತಗಾರ ರ ಮೆಗ್ ಲ್ಯಾನಿಂಗ್ ಅವರು 45 ಇನ್ನಿಂಗ್ಸ್ ನೊಡನೆ ಈ ಹೆಗ್ಗುರುತನ್ನು ತಲುಪಿದ್ದರು.

ಪುರುಷರ ಕ್ರಿಕೆಟ್‌ನಲ್ಲಿ, ದಕ್ಷಿಣ ಆಫ್ರಿಕಾದ ನಿವೃತ್ತ ಬ್ಯಾಟ್ಸ್‌ಮನ್ ಹಶೀಮ್ ಆಮ್ಲಾ 2,000 ಏಕದಿನ ರನ್ ಗಳಿಸಿದ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು 40 ಇನ್ನಿಂಗ್ಸ್‌ಗಳಲ್ಲಿ ಈ ಗುರಿಯನ್ನು ತಲುಪಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com