ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು, ಖರ್ಚಾಗ್ತಿದ್ದ ಹಣವನ್ನು ಸೇನೆಗೆ ನೀಡಲು ಮುಂದಾದ ದಾದಾ

ಮಾಜಿ ಟೀಂ ಇಂಡಿಯಾ ನಾಯಕ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ನಂತರ ಉತ್ಸಾಹ, ಚುರುಕುನಿಂದ ಕಾರ್ಯ ನಿರ್ವಹಿಸುತ್ತಿದ್ದು, ಅನೇಕ ಸುಧಾರಣೆಗಳಿಗೆ ಮುಂದಾಗಿದ್ದಾರೆ.
ಸೌರವ್ ಗಂಗೂಲಿ
ಸೌರವ್ ಗಂಗೂಲಿ

ಮುಂಬೈ: ಮಾಜಿ ಟೀಂ ಇಂಡಿಯಾ ನಾಯಕ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ನಂತರ ಉತ್ಸಾಹ, ಚುರುಕುನಿಂದ ಕಾರ್ಯ ನಿರ್ವಹಿಸುತ್ತಿದ್ದು, ಅನೇಕ ಸುಧಾರಣೆಗಳಿಗೆ ಮುಂದಾಗಿದ್ದಾರೆ.

ಐಪಿಎಲ್  ಉದ್ಘಾಟನಾ ಸಮಾರಂಭಕ್ಕೆ ಕೋಟ್ಯಾಂತರ ರೂಪಾಯಿ ಸುಮ್ಮನೆ ಖರ್ಚಾಗ್ತಿದೆ ಎಂದು ಚಿಂತನೆ ನಡೆಸಿರುವ ಬಿಸಿಸಿಐ ಇದೀಗ ಆ ಕಾರ್ಯಕ್ರಮವನ್ನು ರದ್ದುಪಡಿಸಲು ನಿರ್ಧರಿಸಿದೆಯಂತೆ. 

ಈ ವರ್ಷ ನಡೆದ ಐಪಿಎಲ್ ಲೀಗ್ ನಲ್ಲಿ ಕೂಡಾ, ಪೂಲ್ವಾಮಾದಲ್ಲಿ ನಡೆದ ಸಿಆರ್ ಪಿಎಫ್ ಯೋಧರ ಮೇಲಿನ ಉಗ್ರರ ದಾಳಿಯಿಂದ ನೊಂದವರಿಗೆ ಸಹಾಯ ನೀಡಲು ಐಪಿಎಲ್ ಉದ್ಘಾಟನಾ ಸಮಾರಂಭವನ್ನು ನಿಲ್ಲಿಸಲಾಗಿತ್ತು. ಇದೀ ಮುಂದಿನ ಲೀಗ್ ಗಳಲ್ಲಿಯೂ ಕೂಡಾ ಐಪಿಎಲ್ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಪಡಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ಐಪಿಎಲ್ ಉದ್ಘಾಟನಾ ಕಾರ್ಯಕ್ರಮಕ್ಕೆ 20 ಕೋಟಿ ರೂ. ವೆಚ್ಚವಾಗುತ್ತಿದೆ. ಅದೇ ಹಣದಲ್ಲಿ 11 ಕೋಟಿಯನ್ನು ಭಾರತೀಯ ಸೇನೆಗೆ 7 ಕೋಟಿಯನ್ನು ಸಿಆರ್ ಪಿಎಫ್ ಹಾಗೂ ನೌಕಾ ಮತ್ತು ವಾಯು ಸೇನೆಗೆ ತಲಾ ಒಂದೊಂದು ಕೋಟಿ ಕೊಡಲು ಬಿಸಿಸಿಐ ನಿರ್ಧರಿಸಿದೆ. 

ಇತ್ತೀಚಿಗೆ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದ ಸೌರವ್ ಗಂಗೂಲಿ ಈ ರೀತಿಯ ಯೋಚನೆಯ ಮೂಲಕ ಜನರ ಹೃದಯ ಗೆಲ್ಲಲು ಮುಂದಾಗಿದ್ದಾರೆ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com