ಎರಡನೇ ಟಿ-20: ಮತ್ತೆ ಅಬ್ಬರಿಸಿದ ಶಫಾಲಿ, ಭಾರತಕ್ಕೆ 10 ವಿಕೆಟ್ ಭರ್ಜರಿ ಜಯ

ಹದಿಹರಿಯದ ಶೆಫಾಲಿ ವರ್ಮಾ ಸತತ ಎರಡನೇ ಅರ್ಧಶತಕ ಹಾಗೂ ದೀಪ್ತಿ ಶರ್ಮಾ ಅವರ ನಾಲ್ಕು ವಿಕೆಟ್ ಗೊಂಚಲು ನೆರವಿನಿಂದ ಭಾರತ ಮಹಿಳಾ ತಂಡ ಎರಡನೇ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರದ್ಧ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.
ಎರಡನೇ ಟಿ-20: ಮತ್ತೆ ಅಬ್ಬರಿಸಿದ ಶಫಾಲಿ, ಭಾರತಕ್ಕೆ 10 ವಿಕೆಟ್ ಭರ್ಜರಿ ಜಯ
ಎರಡನೇ ಟಿ-20: ಮತ್ತೆ ಅಬ್ಬರಿಸಿದ ಶಫಾಲಿ, ಭಾರತಕ್ಕೆ 10 ವಿಕೆಟ್ ಭರ್ಜರಿ ಜಯ

ಸೇಂಟ್ ಲೂಸಿಯಾ: ಹದಿಹರಿಯದ ಶೆಫಾಲಿ ವರ್ಮಾ ಸತತ ಎರಡನೇ ಅರ್ಧಶತಕ ಹಾಗೂ ದೀಪ್ತಿ ಶರ್ಮಾ ಅವರ ನಾಲ್ಕು ವಿಕೆಟ್ ಗೊಂಚಲು ನೆರವಿನಿಂದ ಭಾರತ ಮಹಿಳಾ ತಂಡ ಎರಡನೇ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರದ್ಧ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

ಭಾನುವಾರ ತಡರಾತ್ರಿ (ಭಾರತ ಕಾಲಮಾನ) ಮುಕ್ತಾಯವಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ನಿಗದಿತ 20 ಓವರ್ ಗಳಿಗೆ ಏಳು ವಿಕೆಟ್ ನಷ್ಟಕ್ಕೆ 103 ರನ್ ದಾಖಲಿಸಿತು. ಬಳಿಕ ಸುಲಭ ಗುರಿ ಹಿಂಬಾಲಿಸಿದ ಭಾರತ ಕೇವಲ 10. 3 ಓವರ್ ಗಳಿಗೆ ವಿಕೆಟ್ ನಷ್ಟವಿಲ್ಲದೆ 104 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಪಡೆಯಿತು.

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅರ್ಧ ಶತಕ ಸಿಡಿಸಿದ ಅತಿ ಕಿರಿಯ ಬ್ಯಾಟರ್ ಆಗಿರುವ ಶೆಪಾಲ್ ಎರಡನೇ ಪಂದ್ಯದಲ್ಲೂ 69 ರನ್ ಚಚ್ಚಿದ್ದರು. ಮತ್ತೊರ್ವ ಆರಂಭಿಕ ಆಟಗಾರ್ತಿಗೆ ಮಂದಾನಾ (30*) ಅವರ ಜತೆ ಮುರಿಯದ ಮೊದಲನೇ ವಿಕೆಟ್ ಗೆ 104 ರನ್ ಸಿಡಿಸಿ ತಂಡವನ್ನು 9.3 ಓವರ್ ಗಳು ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು.

ಉಭಯ ತಂಡಗಳ ನಡುವಿನ ಮುಂದಿನ ಟಿ 20 ಐ ನವೆಂಬರ್ 15 ರಂದು ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌

ಭಾರತ 104/0 (ಶೆಫಾಲಿ ವರ್ಮಾ 69 *, ಸ್ಮೃತಿ ಮಂಧಾನ 30 *) 
ವೆಸ್ಟ್ ಇಂಡೀಸ್ 103/7 (ಚೆಡಿಯನ್ ನೇಷನ್ 32, ಹೇಲಿ ಮ್ಯಾಥ್ಯೂಸ್ 23, ದೀಪ್ತಿ ಶರ್ಮಾ 4-10)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com