ಟಿ-20 ವಿಶ್ವಕಪ್ ಗೆಲ್ಲುವ ಅವಕಾಶ ಭಾರತಕ್ಕಿದೆ- ಅಖ್ತರ್ 

ಮುಂದಿನ ವರ್ಷದ ಟಿ-20 ವಿಶ್ವಕಪ್ ಗೆಲ್ಲಲು ಭಾರತಕ್ಕೆ ಅತ್ಯುತ್ತಮ ಅವಕಾಶವಿದೆ ಎಂದು ಪಾಕಿಸ್ತಾನ ತಂಡದ ಮಾಜಿ ವೇಗಿ ಶೊಯೆಬ್ ಅಖ್ತರ್, ಭವಿಷ್ಯ ನುಡಿದಿದ್ದಾರೆ.

Published: 12th November 2019 01:32 PM  |   Last Updated: 12th November 2019 01:32 PM   |  A+A-


collection_photo

ಸಂಗ್ರಹ ಚಿತ್ರ

Posted By : Nagaraja AB
Source : UNI

ಲಾಹೋರ್: ಮುಂದಿನ ವರ್ಷದ ಟಿ-20 ವಿಶ್ವಕಪ್ ಗೆಲ್ಲಲು ಭಾರತಕ್ಕೆ ಅತ್ಯುತ್ತಮ ಅವಕಾಶವಿದೆ ಎಂದು ಪಾಕಿಸ್ತಾನ ತಂಡದ ಮಾಜಿ ವೇಗಿ ಶೊಯೆಬ್ ಅಖ್ತರ್, ಭವಿಷ್ಯ ನುಡಿದಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಟಿ-20 ಸರಣಿ ಜಯದ ಬಳಿಕ ಪ್ರತಿಕ್ರಿಯಿಸಿರುವ ಅವರು, "ಮೊದಲನೇ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದರೂ ನಂತರದ ಪಂದ್ಯಗಳಲ್ಲಿ ಗೆದ್ದು ಸರಣಿಯನ್ನು ತನ್ನದಾಗಿಸಿಕೊಂಡಿತು. ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ನಾಯಕ ರೋಹಿತ್ ಶರ್ಮಾ ಅವರಿಗೂ ಸಲ್ಲುತ್ತದೆ." ಎಂದು ಹೇಳಿದ್ದಾರೆ. 

ಬಾಂಗ್ಲಾದೇಶ ಸಾಮಾನ್ಯ ತಂಡವೇನಲ್ಲಾ, ಪಂದ್ಯ ಸೋತ ಮಾತ್ರಕ್ಕೆ ಮುಜುಗರಪಡಬೇಕಾಗಿಲ್ಲ. ಉತ್ತಮವಾಗಿ ಸ್ಪರ್ಧಿಸಿದೆ. ಭಾರತ ಅದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಆಟ ಪ್ರದರ್ಶಿಸಿದ್ದು, ಬಾಂಗ್ಲಾದೇಶಕ್ಕೆ ಹ್ಯಾಟ್ಸ್ ಆಪ್ ಎಂದಿದ್ದಾರೆ. 

ನವದೆಹಲಿಯಲ್ಲಿ ನಡೆದಿದ್ದ  ಬಾಂಗ್ಲಾದೇಶ ವಿರುದ್ಧದ  ಮೊದಲನೇ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. ಇದರೊಂದಿಗೆ 1-0 ಅಂತರದಲ್ಲಿ ಸರಣಿಯನ್ನು ಆರಂಭಿಸಿತ್ತು. ಬಳಿಕ, ಎಚ್ಚೆತ್ತುಕೊಂಡ ಭಾರತ ಎರಡು ಹಾಗೂ ಮೂರನೇ ಪಂದ್ಯಗಳಲ್ಲಿ ಗೆದ್ದು ಚುಟುಕು ಸರಣಿಯನ್ನು 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp