2014ರಲ್ಲಿ ನನ್ನ ಕ್ರಿಕೆಟ್ ವೃತ್ತಿ ಜೀವನ ಮುಗಿಯಿತು ಅಂದುಕೊಂಡಿದ್ದೆ: ವಿರಾಟ್ ಕೊಹ್ಲಿ

ಮಾನಸಿಕ ತೊಂದರೆ ಅನುಭವಿಸುತ್ತಿರುವ ಆಸ್ಟ್ರೇಲಿಯಾದ ಆಲ್‌ರೌಂಡರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಕ್ರಿಕೆಟ್‌ನಿಂದ ಅನಿರ್ದಿಷ್ಟಾವಧಿ ಅವಧಿಯ ವರೆಗೆ ವಿರಾಮವನ್ನು ತೆಗೆದುಕೊಂಡಿದ್ದಾರೆ.

Published: 14th November 2019 01:33 PM  |   Last Updated: 14th November 2019 06:14 PM   |  A+A-


Virat Kohli

ವಿರಾಟ್ ಕೊಹ್ಲಿ

Posted By : vishwanath
Source : UNI

ಇಂದೋರ್: ಮಾನಸಿಕ ತೊಂದರೆ ಅನುಭವಿಸುತ್ತಿರುವ ಆಸ್ಟ್ರೇಲಿಯಾದ ಆಲ್‌ರೌಂಡರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಕ್ರಿಕೆಟ್‌ನಿಂದ ಅನಿರ್ದಿಷ್ಟಾವಧಿ ಅವಧಿಯ ವರೆಗೆ ವಿರಾಮವನ್ನು ತೆಗೆದುಕೊಂಡಿದ್ದಾರೆ.

ಇದನ್ನು ಸ್ವಾಗತಿಸಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, 2014ರಲ್ಲಿ ಸ್ವತ: ತಮಗೆ ಎದುರಾಗಿರುವ ಮಾನಸಿಕ ಖಿನ್ನತೆ ಸಮಸ್ಯೆಯ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.

2014ರ ಇಂಗ್ಲೆಂಡ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಆಡಿರುವ 10 ಇನ್ನಿಂಗ್ಸ್‌ಗಳಲ್ಲಿ ಕೇವಲ 134 ರನ್ ಮಾತ್ರ ಗಳಿಸಿದ್ದರು. ಈ ಮೂಲಕ ಸತತ ವೈಫಲ್ಯಕ್ಕೊಳಗಾಗಿದ್ದರು.

ನನ್ನ ವೃತ್ತಿ ಜೀವನದ ಒಂದು ಹಂತದಲ್ಲಿ ಜಗತ್ತೇ ಅಂತ್ಯವಾಗಿದೆ ಎಂದು ಭಾವಿಸಿದ್ದೆ. 2014ರ ಇಂಗ್ಲೆಂಡ್ ಪ್ರವಾಸದ ಬಳಿಕ ಏನು ಮಾಡಬೇಕೆಂದು ತೋಚುತ್ತಿರಲಿಲ್ಲ. ಯಾರಿಗಾದರೂ ಏನನ್ನು ಹೇಳಲಿ, ಹೇಗೆ ಮಾತನಾಡಬೇಕು, ಹೇಗೆ ಸಂವಹನ ಮಾಡಬೇಕು ಎಂಬುದು ತಿಳಿದಿರಲಿಲ್ಲ ಎಂದು ವಿವರಿಸಿದರು.

ಪ್ರಾಮಾಣಿಕವಾಗಿ ಹೇಳಬೇಕೆಂದರೆ ಮಾನಸಿಕವಾಗಿ ಉತ್ತಮ ಪರಿಸ್ಥಿತಿಯಲ್ಲಿರಲಿಲ್ಲ. ಪಂದ್ಯದಿಂದ ದೂರವಿರಲು ಬಯಸಿದ್ದೆ ಎಂದು ಕ್ಯಾಪ್ಟನ್ ಕೊಹ್ಲಿ ಸೇರಿಸಿದರು.

ಇಷ್ಟಾದರೂ ವಿರಾಮ ಪಡೆದುಕೊಳ್ಳಬೇಕೇ ಎಂಬ ಬಗ್ಗೆಯೂ ತಮ್ಮಲ್ಲಿ ಖಚಿತತೆ ಇರಲಿಲ್ಲ ಎಂದು ಕ್ಯಾಪ್ಟನ್ ಕೊಹ್ಲಿ ವಿವರಿಸಿದರು.
ನನಗನಿಸುತ್ತದೆ ಇಂತಹ ಅಂಶಗಳು ಹೆಚ್ಚು ಪ್ರಾಮುಖ್ಯತೆಯನ್ನು ಗಿಟ್ಟಿಸಿಕೊಳ್ಳುತ್ತದೆ. ಒಬ್ಬ ಆಟಗಾರ ಮುಖ್ಯ ಎನಿಸಿದರೆ ಆತನತ್ತ ಭಾರತೀಯ ಕ್ರಿಕೆಟ್ ಹೆಚ್ಚಿನ ಗಮನ ಹರಿಸಬೇಕು ಎಂದು ವಿರಾಟ್ ಸೇರಿಸಿದರು.

ನಿಮಗೊಂದು ಕರ್ತವ್ಯವಿರುತ್ತದೆ. ಪ್ರತಿಯೊಬ್ಬರು ಅದರಲ್ಲಿ ಗಮನ ಕೇಂದ್ರಿತರಾಗಿರುತ್ತಾರೆ. ಆದರೆ ಇನ್ನೊಬ್ಬರ ಮನದಲ್ಲಿ ಏನಿದೆ ಎಂಬುದನ್ನು ಅರಿತುಕೊಳ್ಳುವುದು ಕಷ್ಟಕರ ಎಂದರು.

ಮ್ಯಾಕ್ಸ್‌ವೆಲ್ ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟಿಗರಿಗೆ ಮಾದರಿಯಾಗಿದ್ದಾರೆ. ನೀವು ಉತ್ತಮ ಮನೋಭಾವದ ಚೌಕಟ್ಟಿನಲ್ಲಿಲ್ಲದಿದ್ದರೆ, ನೀವು ಪದೇ ಪದೇ ಪ್ರಯತ್ನಿಸುತ್ತೀರಿ. ಆದರೆ ಕೆಲವು ಹಂತದಲ್ಲಿ ತುತ್ತ ತುದಿಯನ್ನು ತಲುಪುತ್ತೇವೆ. ಹಾಗಾಗಿ ಹೆಚ್ಚಿನ ಸಮಯದ ಅಗತ್ಯವಿರುತ್ತದೆ ಎಂದರು.

ಕ್ರಿಕೆಟ್ ಮೀರಿ ಜೀವನವೊಂದಿದೆ. ಪ್ರತಿಯೊಬ್ಬರು ತಮ್ಮ ವೃತ್ತಿ ಜೀವನದಲ್ಲಿ ಏಳು ಬೀಳುಗಳನ್ನು ಅನುಭವಿಸುತ್ತಾರೆ. ಹೇಗಾದರೂ, ಅವುಗಳನ್ನು ಗುರುತಿಸಿ ತ್ವರಿತವಾಗಿ ಪರಿಹರಿಸುವುದು ಅಗತ್ಯವೆನಿಸಿದೆ ಎಂದು ವಿರಾಟ್ ತಿಳಿಸಿದರು.


Stay up to date on all the latest ಕ್ರಿಕೆಟ್ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp