ಎಂಎಸ್ ಧೋನಿ ಸಲಹೆಯಿಂದ ಯಶಸ್ಸು ಕಂಡೆ: ವಿಶ್ವ ದಾಖಲೆ ವೀರ ದೀಪಕ್ ಚಹಾರ್
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮಾಜಿ ನಾಯಕ ಧೋನಿ ಸೂಕ್ತ ಸಲಹೆಗಳನ್ನು ನೀಡಿದ್ದು, ಹಾಗೂ ಮೈದಾನದಲ್ಲಿ ಹಲವು ಬಾರಿ ಗದರಿಸಿದ್ದರಿಂದ ಶಿಸ್ತು ಬದ್ಧ ದಾಳಿ ನಡೆಸಲು ಸಧ್ಯವಾಗಿದೆ ಎಂದು ಯುವ ವೇಗಿ ದೀಪಕ್ ಚಹಾರ್ ತಿಳಿಸಿದ್ದಾರೆ.
Published: 14th November 2019 08:14 AM | Last Updated: 14th November 2019 08:14 AM | A+A A-

ದೀಪಕ್ ಚಹಾರ್-ಎಂಎಸ್ ಧೋನಿ
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮಾಜಿ ನಾಯಕ ಧೋನಿ ಸೂಕ್ತ ಸಲಹೆಗಳನ್ನು ನೀಡಿದ್ದು, ಹಾಗೂ ಮೈದಾನದಲ್ಲಿ ಹಲವು ಬಾರಿ ಗದರಿಸಿದ್ದರಿಂದ ಶಿಸ್ತು ಬದ್ಧ ದಾಳಿ ನಡೆಸಲು ಸಧ್ಯವಾಗಿದೆ ಎಂದು ಯುವ ವೇಗಿ ದೀಪಕ್ ಚಹಾರ್ ತಿಳಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಅಲ್ಲದೆ ಅವರು ತಪ್ಪು ಮಾಡಿದ್ದಾಗ ತಿದ್ದಿ ಹೇಳಿದ್ದಾರೆ. ಯುವ ಆಟಗಾರರು ಮಾಹಿ ನೀಡಿದ ಸಲಹೆಯನ್ನು ಅನುಸರಿಸಿ ಯಶಸ್ಸು ಕಂಡಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ದೀಪಕ್ ಚಹಾರ್ 3.2 ಓವರ್ ನಲ್ಲಿ ಕೇವಲ 7 ರನ್ ನೀಡಿ 6 ವಿಕೆಟ್ ಪಡೆದು ವಿಶ್ವ ದಾಖಲೆ ಬರೆದಿದ್ದರು. ಇದರ ಜೊತೆಗೆ ಹ್ಯಾಟ್ರಿಕ್ ವಿಕೆಟ್ ಸಾಧನೆಯನ್ನು ಮಾಡಿದ್ದರು.