ದ್ವಿಶತಕದ ಹಾದಿಯಲ್ಲಿ ಮಾಯಾಂಕ್ ಗೆ ಕೊಹ್ಲಿ ನೀಡಿದ ಮೇಸೆಜ್ ಏನಾಗಿತ್ತು ಗೊತ್ತಾ?

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್  ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಮಾಯಾಂಕ್ ಅಗರ್ ವಾಲ್ ದ್ವಿಶತಕ ಸಿಡಿಸುವ ಮೂಲಕ ಉತ್ತಮ ಪ್ರದರ್ಶನ ತೋರಿದ್ದಾರೆ. 

Published: 15th November 2019 08:17 PM  |   Last Updated: 15th November 2019 08:45 PM   |  A+A-


MayankAgarwalKohli

ಮಾಯಾಂಕ್ , ಕೊಹ್ಲಿ

Posted By : Nagaraja AB
Source : The New Indian Express

ಇಂದೋರ್ : ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ  ಆರಂಭಿಕ ಬ್ಯಾಟ್ಸ್ ಮನ್ ಮಾಯಾಂಕ್ ಅಗರ್ ವಾಲ್ ದ್ವಿಶತಕ ಸಿಡಿಸುವ ಮೂಲಕ ಉತ್ತಮ ಪ್ರದರ್ಶನ ತೋರಿದ್ದಾರೆ. 

330 ಎಸೆತಗಳಲ್ಲಿ 234 ರನ್ ಗಳಿಸುವ ಮೂಲಕ ಟೆಸ್ಟ್ ನಲ್ಲಿ ಮೂರನೇ ಶತಕ ಗಳಿಸಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 493 ರನ್ ಗಳಿಸಿದ್ದು, 343 ರನ್ ಗಳ ಮುನ್ನಡೆ ಸಾಧಿಸಿದೆ. 

ರವೀಂದ್ರ ಜಡೇಜಾ ಅವರ ಅರ್ಧಶತಕ ಹಾಗೂ ಮಾಯಾಂಕ್ ಅಗರ್ ವಾಲ್ ಅವರ ದ್ವಿಶತಕದಿಂದ ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಅಭಿಮಾನಿಗಳ ಹರ್ಷೋದ್ಘಾರ ಮುಗಿಲುಮುಟ್ಟಿತು. 

ಮಾಯಾಂಕ್ ಅಗರ್ ವಾಲ್ 150 ರನ್ ಗಳನ್ನು ಪೂರೈಸಿದಾಗ ಡ್ರೆಸ್ಸಿಂಗ್ ರೂಮ್ ನಲ್ಲಿ ಖುಷಿಯ ಅಲೆಯಲ್ಲಿ ತೇಲುತ್ತಿದ್ದ ಟೀಂ ಇಂಡಿಯಾ ಆಟಗಾರರತ್ತ ಬ್ಯಾಟ್ ಎತ್ತಿ ಸಂತೋಷ ವ್ಯಕ್ತಪಡಿಸಿದ್ದಾರೆ.  ಆ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ದ್ವಿಶತಕ ಮಾಡುವಂತೆ  ಕೈಯಲ್ಲಿಯೇ ಸೂಚನೆ ನೀಡಿದ್ದಾರೆ.ಮಾಯಾಂಕ್ ಅಗರ್ ವಾಲ್ ಕೂಡಾ ಹೆಬ್ಬೆರಳು ಎತ್ತಿ ಓಕೆ ಎಂದಿದ್ದಾರೆ. ಅದೇ ರೀತಿಯಲ್ಲಿ ದ್ವಿಶತಕವನ್ನು ಭಾರಿಸುವಲ್ಲಿ ಯಶಸ್ವಿಯೂ ಆಗಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp