ಮಹಿಳೆಯರ ಟಿ-20 ಸರಣಿ: ಕೆರಿಬಿಯನ್ ನೆಲದಲ್ಲಿ ಗೆದ್ದ ಭಾರತದ ವನಿತೆಯರು!

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಭಾರತ ಮಹಿಳಾ ತಂಡ ನಾಲ್ಕನೇ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಆತಿಥೇಯ ತಂಡವನ್ನು 5 ರನ್ ಗಳಿಂದ ಮಣಿಸಿ, ಸರಣಿಯಲ್ಲಿ 4-0 ಯಿಂದ ಮುನ್ನಡೆ ಸಾಧಿಸಿದೆ.
ಮಹಿಳಾ ಕ್ರಿಕೆಟ್ ತಂಡ
ಮಹಿಳಾ ಕ್ರಿಕೆಟ್ ತಂಡ

ನವದೆಹಲಿ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಭಾರತ ಮಹಿಳಾ ತಂಡ ನಾಲ್ಕನೇ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಆತಿಥೇಯ ತಂಡವನ್ನು 5 ರನ್ ಗಳಿಂದ ಮಣಿಸಿ, ಸರಣಿಯಲ್ಲಿ 4-0 ಯಿಂದ ಮುನ್ನಡೆ ಸಾಧಿಸಿದೆ.

ಭರ್ಜರಿ ಪ್ರದರ್ಶನ ತೋರುತ್ತಿರುವ ಕೌರ್ ಪಡೆ ಆಡಿರುವ 4 ಪಂದ್ಯಗಳ ಪೈಕಿ ನಾಲ್ಕರಲ್ಲೂ ಗೆದ್ದು ಬೀಗಿದೆ. ನಿನ್ನೆ ನಡೆದ ಪಂದ್ಯದಲ್ಲಂತು ಭಾರತ 5 ರನ್​ಗಳ ರೋಚಕ ಜಯ ಸಾಧಿಸಿತು. ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ 20 ಓವರ್ ಗಳ ಪಂದ್ಯವನ್ನು 9 ಓವರ್ ಗಳಿಗೆ ಇಳಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಭಾರತ 9 ಓವರ್ ಗಳಲ್ಲಿ 7 ವಿಕೆಟ್ ಗೆ 50 ರನ್ ಸೇರಿಸಿತು. ಭಾರತ ತಂಡದ ಸ್ಟಾರ್ ಆಟಗಾರ್ತಿಯರು ರನ್ ಕಲೆ ಹಾಕುವಲ್ಲಿ ವಿಫಲರಾದರು. 

ವೇದಾ ಕೃಷ್ಣಮೂರ್ತಿ (5), ಜಾಮೀಮ ರೋಡ್ರಿಗಸ್ (6), ಹರ್ಮನ್ ಪ್ರಿತ್ ಕೌರ್ (6), ದೀಪ್ತಿ ಶರ್ಮಾ (4) ರನ್ ಕಲೆ ಹಾಕುವಲ್ಲಿ ವಿಫಲರಾದರು. ವಿಂಡೀಸ್ ಪರ ಹಾಯ್ ಲೆ ಮ್ಯಾಥ್ಯೂಸ್ 3, ಫ್ಲೆಟ್ಚರ್, ಶೆನೆಟಾ ಗ್ರಿಮಂಡ್ ತಲಾ ಎರಡು ವಿಕೆಟ್ ಕಬಳಿಸಿದರು. 5 ರನ್​​ಗಳ ರೋಚಕ ಗೆಲುವುನೊಂದಿಗೆ ಭಾರತದ ಮಹಿಳೆಯರು 5 ಪಂದ್ಯಗಳ ಟಿ-20 ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದೆ. ಅಂತಿಮ ಪಂದ್ಯ ಬಾಕಿ ಉಳಿದಿದ್ದು ನವೆಂಬರ್ 20 ರಂದು ನಡೆಯಲಿದೆ. ಇದರಲ್ಲೂ ಭಾರತ ಗೆದ್ದರೆ ಸರಣಿ ಕ್ಲೀನ್​ಸ್ವೀಪ್ ಮಾಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com