ಆರ್‌ಸಿಬಿ ತಂಡ ಐಪಿಎಲ್ ಗೆಲ್ಲಬೇಕು ಅಂದರೆ ಕೊಹ್ಲಿ, ಎಬಿಡಿಯನ್ನೆ ನೆಚ್ಚಿಕೊಳ್ಳುವಂತಿಲ್ಲ: ಮೊಯಿನ್ ಅಲಿ

ಅಭಿಮಾನಿಗಳು ಮಾತ್ರ ಈ ಸಲ ಕಪ್ ನಮ್ದೆ ಅಂತಾ ಪ್ರತಿ ಐಪಿಎಲ್ ವೇಳೆಯೂ ಹೇಳುತ್ತಾ ಬರುತ್ತಿದ್ದಾರೆ. ಆದರೆ 12 ಆವೃತ್ತಿ ಕಳೆದರು ಬೆಂಗಳೂರು ತಂಡ ಮಾತ್ರ ಚಾಂಪಿಯನ್ ಆಗಿಲ್ಲ. ಈ ಬಗ್ಗೆ ಮಾತನಾಡಿರುವ ಮೋಹಿನ್ ಅಲಿ ಐಪಿಎಲ್ ಗೆಲ್ಲಬೇಕು ಅಂದರೆ ಕೊಹ್ಲಿ ಮತ್ತು ಎಬಿಡಿಯನ್ನೇ ನೆಚ್ಚಿಕೊಳ್ಳುವಂತಿಲ್ಲ ಎಂದು ಹೇಳಿದ್ದಾರೆ.

Published: 18th November 2019 05:54 PM  |   Last Updated: 18th November 2019 05:54 PM   |  A+A-


AB de Villiers-Virat Kohli

ಡಿವಿಲಿಯರ್ಸ್-ವಿರಾಟ್ ಕೊಹ್ಲಿ

Posted By : Vishwanath S
Source : Online Desk

ನವದೆಹಲಿ: ಅಭಿಮಾನಿಗಳು ಮಾತ್ರ ಈ ಸಲ ಕಪ್ ನಮ್ದೆ ಅಂತಾ ಪ್ರತಿ ಐಪಿಎಲ್ ವೇಳೆಯೂ ಹೇಳುತ್ತಾ ಬರುತ್ತಿದ್ದಾರೆ. ಆದರೆ 12 ಆವೃತ್ತಿ ಕಳೆದರು ಬೆಂಗಳೂರು ತಂಡ ಮಾತ್ರ ಚಾಂಪಿಯನ್ ಆಗಿಲ್ಲ. ಈ ಬಗ್ಗೆ ಮಾತನಾಡಿರುವ ಮೋಹಿನ್ ಅಲಿ ಐಪಿಎಲ್ ಗೆಲ್ಲಬೇಕು ಅಂದರೆ ಕೊಹ್ಲಿ ಮತ್ತು ಎಬಿಡಿಯನ್ನೇ ನೆಚ್ಚಿಕೊಳ್ಳುವಂತಿಲ್ಲ ಎಂದು ಹೇಳಿದ್ದಾರೆ.

ಐಪಿಎಲ್ 13ನೇ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ. ಹೊಸ ಹುರುಪಿನೊಂದಿಗೆ ಅಂಗಳಕ್ಕಿಳಿಯಲಿದೆ. ಇನ್ನು ಅಗತ್ಯವಿಲ್ಲದ 12 ಆಟಗಾರರನ್ನು ತಂಡದಿಂದ ಕೈಬಿಡಲಾಗಿದ್ದು ಇನ್ನು 13 ಆಟಗಾರರನ್ನು ಉಳಿಸಿಕೊಂಡಿದೆ. 

2019ರ ಡಿಸೆಂಬರ್ 19ರಂದು ನಡೆಯಲಿರುವ ಹರಾಜಿಗೆ ಭರ್ಜರಿ ಪೂರ್ವ ತಯಾರಿಯನ್ನು ಆರ್ಸಿಬಿ ನಡೆಸಿದೆ. ಬೆಂಗಳೂರು ಸದ್ಯ ಇಬ್ಬರು ವಿದೇಶಿ ಆಟಗಾರರಾದ ಮೊಹಿನ್ ಅಲಿ ಮತ್ತು ಎಬಿಡಿ ವಿಲಿಯರ್ಸ್ ಅವರನ್ನು ಉಳಿಸಿಕೊಂಡಿದೆ. 

ತಂಡದ ಆರಂಭಿಕ ಆಟಗಾರರು ಬಲಿಷ್ಠ ಬ್ಯಾಟಿಂಗ್ ಮಾಡಿ ಉತ್ತಮ ಆರಂಭಿಕ ಆಟವನ್ನಾಡಬೇಕಿದೆ. ಇದಕ್ಕೆ ಆರಂಭಿಕರು ಹೆಚ್ಚು ಧೈರ್ಯಶಾಲಿಯಾಗಿರಬೇಕು. ವಿಶೇಷವಾಗಿ ಬೆಂಗಳೂರಿನಲ್ಲಿ ವಿಕೆಟ್ ಅತ್ಯುತ್ತಮವಾಗಿರುತ್ತದೆ. ಬೌಂಡರಿಗಳು ಕಿರುದಾಗಿದ್ದು, ಬೌಲರ್ಗಳನ್ನು ಭೀತಿಗೊಳಿಸುತ್ತದೆ ಎಂದು ಮೊಹಿನ್ ಅಲಿ ತಿಳಿಸಿದ್ದಾರೆ. 

ಪ್ರತಿ ಭಾರಿಯೂ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಅವರನ್ನೆ ನೆಚ್ಚಿಕೊಳ್ಳಲು ಆಗುವುದಿಲ್ಲ. ಉಳಿದ ಬ್ಯಾಟ್ಸ್ ಮನ್ ಗಳು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಬೇಕು ಎಂದರು. 
 

Stay up to date on all the latest ಕ್ರಿಕೆಟ್ news
Poll
school

ರಾಷ್ಟ್ರೀಯ ಶಿಕ್ಷಣ ನೀತಿ-2020: 5 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಕಲಿಸುವ ಪ್ರಸ್ತಾಪವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp