ಕೆಪಿಎಲ್ ಫಿಕ್ಸಿಂಗ್ ಪ್ರಕರಣಕ್ಕೆ ಟ್ವಿಸ್ಟ್: ಬುಕ್ಕಿಗಳ ಹನಿಟ್ರ್ಯಾಪ್ ಬಲೆಯಲ್ಲಿ ಆಟಗಾರರು!

ಕೆಪಿಎಲ್ ಫಿಕ್ಸಿಂಗ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕೆಪಿಎಲ್ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಬಲೆಯಲ್ಲಿ ಕೆಡವಲು ಹನಿಟ್ರ್ಯಾಪ್, ವಿದೇಶ ಪ್ರವಾಸ ಮತ್ತು ಭಾರೀ ಹಣ ನೀಡಿವ ಆಮೀಷ ಒಡ್ಡಲಾಗಿದೆ.
ಭಾಸ್ಕರ್ ರಾವ್
ಭಾಸ್ಕರ್ ರಾವ್

ಬೆಂಗಳೂರು: ಕೆಪಿಎಲ್ ಫಿಕ್ಸಿಂಗ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕೆಪಿಎಲ್ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಬಲೆಯಲ್ಲಿ ಕೆಡವಲು ಹನಿಟ್ರ್ಯಾಪ್, ವಿದೇಶ ಪ್ರವಾಸ ಮತ್ತು ಭಾರೀ ಹಣ ನೀಡಿವ ಆಮೀಷ ಒಡ್ಡಲಾಗಿದೆ.

ಇತ್ತೀಚೆಗಷ್ಟೆ ಫಿಕ್ಸಿಂಗ್ ನಡೆಸಿದ ಆರೋಪದಡಿ ಬೆಳಗಾವಿ ಫ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಶ್ವಾಕ್ ತಾರ್​ನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದರು. 

ಸದ್ಯ ಈ ಫಿಕ್ಸಿಂಗ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಟ್ರ್ಯಾಪ್‌ ಮೂಲಕ ಕೆಲವು ಆಟಗಾರರನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

ಆಟಗಾರರ ಬಳಿ ಹುಡುಗಿಯರನ್ನು ಕಳುಹಿಸಿ ರಹಸ್ಯವಾಗಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಅವರನ್ನು ಬ್ಲಾಕ್ ಮೇಲ್ ಮಾಡಲಾಗಿದೆ, ತಮ್ಮ ಸೂಚನೆಯಂತೆ ಆಡುವಂತೆ ಬೆದರಿಕೆ ಹಾಕಲಾಗಿದೆ.

ಈಗಾಗಲೇ 7 ಮಂದಿಯನ್ನು ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಎಲ್ಲಾ ತಂಡಗಳಿಗೂ ನೋಟಿಸ್ ನೀಡಲಾಗಿದೆ. ಬಹಳಷ್ಟು ಆಟಗಾರರಿಗೆ ಹನಿ ಟ್ರ್ಯಾಪಿಂಗ್ ನಡೆಸಲಾಗಿದೆ. 

ಸದ್ಯ ಕೆಪಿಎಲ್ ತಂಡದ ಮಾಲೀಕರಿಗೆ ನೀಡಿರುವ ನೋಟಿಸ್‌ಗಿಂತ ಕೆಎಸ್‌ಸಿಎಗೆ ನೀಡಿರುವ ನೋಟಿಸ್‌ನಲ್ಲಿ ಸಿಸಿಬಿ ಹೆಚ್ಚಿನ ವಿವರಗಳನ್ನು ಕೇಳಿದೆ. ಈವರೆಗೆ ಮೋಸದ ಆಟಕ್ಕೆ ಎಷ್ಟು ಮಂದಿ ವಿರುದ್ಧ ಹೇಗೆ ಕ್ರಮ ಕೈಗೊಂಡಿದ್ದೀರಿ?, ಕೆಎಸ್‌ಸಿಎ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುವ ಕ್ಲಬ್‌ ಯಾವುವು? ಹೊಂದಾಣಿಕೆಗೆ ಮಾಡಿಕೊಂಡಿರುವ ಒಪ್ಪಂದಗಳೇನು? ಸೇರಿದಂತೆ ಅನೇಕ ಪ್ರಶ್ನೆಗಳು ಕೆಎಸ್​ಸಿಎಗೆ ಕೇಳಿದ್ದು ಉತ್ತರ ನೀಡಬೇಕಿದೆ.

ಆರೋಪಿಗಳು ಎಲ್ಲೇ ಇದ್ದರೂ ಅವರನ್ನು ನಾವು ಬಂಧಿಸುತ್ತೇವೆ. ಸಾಕ್ಷಿಗಳು ಸಿಕ್ಕಕೂಡಲೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com