ರೋಹಿತ್ ಶರ್ಮಾ ಅದ್ಭುತ ಕ್ಯಾಚ್‌ಗೆ ಸ್ಟನ್ ಆದ ವಿರಾಟ್ ಕೊಹ್ಲಿ, ವಿಡಿಯೋ ವೈರಲ್!

ಬಾಂಗ್ಲಾದೇಶ ವಿರುದ್ಧದ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಡೈವ್ ಮಾಡಿ ಒಂದೇ ಕೈಯಲ್ಲಿ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದು ಇದನ್ನು ಕಂಡ ವಿರಾಟ್ ಕೊಹ್ಲಿ ಸ್ಟನ್ ಆದರು.
ರೋಹಿತ್-ಕೊಹ್ಲಿ
ರೋಹಿತ್-ಕೊಹ್ಲಿ

ಕೋಲ್ಕತ್ತಾ: ಬಾಂಗ್ಲಾದೇಶ ವಿರುದ್ಧದ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಡೈವ್ ಮಾಡಿ ಒಂದೇ ಕೈಯಲ್ಲಿ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದು ಇದನ್ನು ಕಂಡ ವಿರಾಟ್ ಕೊಹ್ಲಿ ಸ್ಟನ್ ಆದರು. 

ಕೋಲ್ಕತ್ತಾದ ಈಡೆನ್ ಗಾರ್ಡನ್ ನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಸಂಕಷ್ಟಕ್ಕೆ ಸಿಲುಕಿದೆ. 

ಉಮೇಶ್ ಯಾದವ್ ಬೌಲಿಂಗ್ ನಲ್ಲಿ ಬಾಂಗ್ಲಾ ಬ್ಯಾಟ್ಸ್ ಮನ್ ಮೊಮಿನೂಲ್ ಡ್ರೈವ್ ಮಾಡಿದರು. ಚೆಂಡು ಫಸ್ಟ್ ಸ್ಲಿಪ್ ನಲ್ಲಿ ಹೋಗುತ್ತಿದ್ದಾಗ ಎರಡನೇ ಸ್ಲಿಪ್ ನಲ್ಲಿದ್ದ ರೋಹಿತ್ ಶರ್ಮಾ ಡೈವ್ ಮಾಡಿ ಕ್ಯಾಚ್ ಹಿಡಿದಿದ್ದು ಫಸ್ಟ್ ಸ್ಲಿಪ್ ನಲ್ಲಿದ್ದ ವಿರಾಟ್ ಕೊಹ್ಲಿ ಸ್ಟನ್ ಆಗಿ ನಿಂತರು.

ಭೋಜನ ವಿರಾಮಕ್ಕೆ ಬಾಂಗ್ಲಾದೇಶ 6 ವಿಕೆಟ್ ಕಳೆದುಕೊಂಡು 73 ರನ್ ಪೇರಿಸಿದೆ. ಇಸ್ಲಾಂ 29 ಮತ್ತು ಲಿಟನ್ ದಾಸ್ 24 ರನ್ ಪೇರಿಸಿದ್ದು ಇನ್ನು ರ್ಯಾರು ಎರಡು ಅಂಕಿಯನ್ನು ಸಹ ದಾಟಲಿಲ್ಲ.

ಭಾರತ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಉಮೇಶ್ ಯಾದವ್ 3, ಇಶಾನ್ ಶರ್ಮಾ 2 ವಿಕೆಟ್ ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com