'ಪಿಂಕ್' ಚೆಂಡಲ್ಲಿ ಶತಕ ಸಿಡಿಸಿ ಕೊಹ್ಲಿ ದಾಖಲೆ; ವಿರಾಟ್ ಆಟಕ್ಕೆ ಫಿದಾ ಆಗಿ ಚಪ್ಪಾಳೆ ತಟ್ಟಿದ ಬೌಲರ್, ವಿಡಿಯೋ!

ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯದ ಪಿಂಕ್ ಚೆಂಡಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಅಲ್ಲದೆ ತಮ್ಮ ಅದ್ಭುತ ಡ್ರೈವ್ ಗಳ ಮೂಲಕ ಎದುರಾಳಿ ತಂಡದ ಆಟಗಾರನಿಂದ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ-ಇಬಾದತ್ ಹುಸೇನ್
ವಿರಾಟ್ ಕೊಹ್ಲಿ-ಇಬಾದತ್ ಹುಸೇನ್

ಕೋಲ್ಕತ್ತಾ: ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯದ ಪಿಂಕ್ ಚೆಂಡಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಅಲ್ಲದೆ ತಮ್ಮ ಅದ್ಭುತ ಡ್ರೈವ್ ಗಳ ಮೂಲಕ ಎದುರಾಳಿ ತಂಡದ ಆಟಗಾರನಿಂದ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಇಬಾದತ್ ಹುಸೇನ್ ಎಸೆದ 17ನೇ ಓವರ್ ನಲ್ಲಿ ವಿರಾಟ್ ಕೊಹ್ಲಿ ಕವರ್ ಡ್ರೈವ್ ಮೂಲಕ ಬೌಂಡರಿ ಬಾರಿಸಿದ್ದರು. ಈ ಡ್ರೈವ್ ಗೆ ಮನಸೋತ ಇಬಾದತ್ ಚಪ್ಪಾಳೆ ತಟ್ಟಿ ಕೊಹ್ಲಿಯನ್ನು ಪ್ರಶಂಸಿಸಿದರು. 

ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದಾರೆ. 159 ಎಸೆತಗಳಲ್ಲಿ ಕೊಹ್ಲಿ 100 ರನ್ ಸಿಡಿಸಿದರು. ಇದರೊಂದಿಗೆ 27ನೇ ಟೆಸ್ಟ್ ಶತಕ ಸಿಡಿಸಿದ್ದು ನಾಯಕನಾಗಿ 20ನೇ ಶತಕ ಸಿಡಿಸಿದ ಆಟಗಾರನಾಗಿದ್ದಾರೆ.

ಎರಡನೇ ದಿನದಾಟದ ಭೋಜನ ವಿರಾಮ ವೇಳೆಗೆ ಭಾರತ 4 ವಿಕೆಟ್ ನಷ್ಟಕ್ಕೆ 289 ರನ್ ಪೇರಿಸಿದ್ದು ವಿರಾಟ್ ಕೊಹ್ಲಿ ಅಜೇಯ 130 ರನ್ ಪೇರಿಸಿ ಆಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com