ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ಸಿಸಿಬಿನಿಂದ ಅಂಪೈರ್ ವಿಚಾರಣೆ

ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಫಿಕ್ಸಿಂಗ್ ಪ್ರಕರಣದ ನಿಖೆ ನಡೆಸುತ್ತಿರುವ ಕೇಂದ್ರ ಅಪರಾಧ ಶಾಖೆಯ (ಸಿಸಿಬಿ) ಅಧಿಕಾರಿಗಳು ತನಿಖೆಯ ಭಾಗವಾಗಿ ಅಂಪೈರ್ ಗಳನ್ನು ಪ್ರಶ್ನಿಸಿದ್ದಾರೆ.
 

Published: 23rd November 2019 08:29 AM  |   Last Updated: 23rd November 2019 08:29 AM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : The New Indian Express

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಫಿಕ್ಸಿಂಗ್ ಪ್ರಕರಣದ ನಿಖೆ ನಡೆಸುತ್ತಿರುವ ಕೇಂದ್ರ ಅಪರಾಧ ಶಾಖೆಯ (ಸಿಸಿಬಿ) ಅಧಿಕಾರಿಗಳು ತನಿಖೆಯ ಭಾಗವಾಗಿ ಅಂಪೈರ್ ಗಳನ್ನು ಪ್ರಶ್ನಿಸಿದ್ದಾರೆ.

ಫಿಕ್ಸಿಂಗ್ ನಡೆದಿದ್ದ ವೇಳೆ ಅಂಪೈರ್ ಆಗಿದ್ದ ಬಿ.ಕೆ.ರವಿ ಅವರನ್ನು ಶುಕ್ರವಾರ ಸಿಸಿಬಿ ಪೊಲೀಸರು ಕೆಲವು ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಕೆಲವು ಪಂದ್ಯಗಳಿಗೆ ರವಿ ಮೂರನೇ ಅಂಪೈರ್ ಆಗಿ ಕೆಲಸ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಂಡರ್ -23 ಇಂಡಿಯಾ ನಾಯಕ ರವಿಯ ಮಗ ಬಿ.ಆರ್.ಶರತ್ ಬೆಂಗಳೂರು ಬ್ಲಾಸ್ಟರ್ಸ್ ಕೆಪಿಎಲ್ ತಂಡದ ಆಟಗಾರನಾಗಿದ್ದು, ತನಿಖೆಯ ಭಾಗವಾಗಿ ಪೊಲೀಸರು ಆತನನ್ನು ಕರೆಸಿಕೊಳ್ಳಲಿದ್ದಾರೆ.ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಆಟಗಾರರು ಮತ್ತು ಕೋಚ್ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp