ಶತಕ ಸಿಡಿಸಿ ಖುಷಿಯಲ್ಲಿದ್ದ ಕೊಹ್ಲಿಗೆ ಶಾಕ್ ಕೊಟ್ಟ ಬಾಂಗ್ಲಾ ಫೀಲ್ಡರ್, ವಿಡಿಯೋ ವೈರಲ್!

ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಶತಕ ಸಿಡಿಸಿದ ಖುಷಿಯಲ್ಲಿದ್ದರು. ಇದೇ ವೇಳೆ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಕೊಹ್ಲಿಯನ್ನು ಔಟ್ ಮಾಡುವ ಮೂಲಕ ಬಾಂಗ್ಲಾ ಫೀಲ್ಡರ್ ಶಾಕ್ ಕೊಟ್ಟಿದ್ದಾರೆ.
ಕೊಹ್ಲಿ-ತೈಜುಲ್
ಕೊಹ್ಲಿ-ತೈಜುಲ್

ಕೋಲ್ಕತ್ತಾ: ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಶತಕ ಸಿಡಿಸಿದ ಖುಷಿಯಲ್ಲಿದ್ದರು. ಇದೇ ವೇಳೆ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಕೊಹ್ಲಿಯನ್ನು ಔಟ್ ಮಾಡುವ ಮೂಲಕ ಬಾಂಗ್ಲಾ ಫೀಲ್ಡರ್ ಶಾಕ್ ಕೊಟ್ಟಿದ್ದಾರೆ. 

ಕೋಲ್ಕತ್ತಾದ ಈಡೆನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 136 ರನ್ ಪೇರಿಸಿ ಆಡುತ್ತಿದ್ದರು. ಇಬಾದತ್ ಹುಸೇನ್ ಬೌಲಿಂಗ್ ನಲ್ಲಿ ಲೇಗ್ ಸೈಡ್ ನಲ್ಲಿ ಬ್ಯಾಟ್ ಬೀಸಿದರು. ಈ ವೇಳೆ ಬೌಂಡರಿ ಗೆರೆಯಲ್ಲಿದ್ದ ತೈಜುಲ್ ಡೈವ್ ಮಾಡಿ ಅದ್ಭುತವಾಗಿ ಕ್ಯಾಚ್ ಹಿಡಿದರು. 

ತೈಜುಲ್ ಕ್ಯಾಚ್ ಹಿಡಿದಿದ್ದನ್ನು ನೋಡಿ ವಿರಾಟ್ ಕೊಹ್ಲಿ ಸ್ಟನ್ ಆಗಿ ನಿಂತರು. ನಂತರ ಖುಷಿಯಲ್ಲೇ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಸದ್ಯ ಈ ವಿಡಿಯೋ ಇದೀಗ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com