ಲೈಟ್‍ಗಳ ನಡುವೆ ಹೆಚ್ಚು ಅಭ್ಯಾಸ ಅಗತ್ಯವಿದೆ: ಚೇತೇಶ್ವರ ಪೂಜಾರ

ಟೀಂ ಇಂಡಿಯಾ ಹೆಚ್ಚು ಹೊನಲು ಬೆಳಕಿನ ಟೆಸ್ಟ್ ಪಂದ್ಯಗಳಾಡಬೇಕೆಂದರೆ ಪಿಂಕ್ ಬಾಲ್ ನಲ್ಲಿ ಲೈಟ್‍ಗಳ ಮಧ್ಯೆ ಹೆಚ್ಚು ಅಭ್ಯಾಸ ನಡೆಸಬೇಕು ಎಂದು ಭಾರತ ತಂಡದ ಹಿರಿಯ ಬ್ಯಾಟ್ಸ್‍ಮನ್ ಚೇತೇಶ್ವರ ಪೂಜಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಚೇತೇಶ್ವರ ಪೂಜಾರ
ಚೇತೇಶ್ವರ ಪೂಜಾರ

ಕೋಲ್ಕತಾ: ಟೀಂ ಇಂಡಿಯಾ ಹೆಚ್ಚು ಹೊನಲು ಬೆಳಕಿನ ಟೆಸ್ಟ್ ಪಂದ್ಯಗಳಾಡಬೇಕೆಂದರೆ ಪಿಂಕ್ ಬಾಲ್ ನಲ್ಲಿ ಲೈಟ್‍ಗಳ ಮಧ್ಯೆ ಹೆಚ್ಚು ಅಭ್ಯಾಸ ನಡೆಸಬೇಕು ಎಂದು ಭಾರತ ತಂಡದ ಹಿರಿಯ ಬ್ಯಾಟ್ಸ್‍ಮನ್ ಚೇತೇಶ್ವರ ಪೂಜಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ತಂಡ ಪ್ರಥಮ ಇನಿಂಗ್ಸ್ ನಲ್ಲಿ 106 ರನ್ ಗಳಿಗೆ ಆಲೌಟ್ ಆಗಿತ್ತು. ಪ್ರಥಮ ಇನಿಂಗ್ಸ್ ಆರಂಭಿಸಿದ ಭಾರತ 9 ವಿಕೆಟ್ ನಷ್ಟಕ್ಕೆ 347 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಬಳಿಕ, ದ್ವಿತೀಯ ಇನಿಂಗ್ಸ್ ಆರಂಭಿಸಿದ ಬಾಂಗ್ಲಾ, ಆರು ವಿಕೆಟ್ ನಷ್ಟಕ್ಕೆ 152 ರನ್ ದಾಖಲಿಸಿದೆ.

ಎರಡನೇ ದಿನದ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಇದೀಗ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಆಡಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕಾರಣ. ನಾವು ಲೈಟ್ ಗಳ ನಡುವೆ ಹೆಚ್ಚು ಅಭ್ಯಾಸ ಮಾಡಿದಾಗ ಈ ಚೆಂಡಿನಲ್ಲಿ ಹೆಚ್ಚಿನ ಪಂದ್ಯಗಳಾಡಲು ಸಾಧ್ಯ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com