'ಯಂಗ್‍ಸ್ಟರ್' ಎಂದು ಹಿಟ್‍ಮನ್ ಕಿಚಾಯಿಸಿದ ಯಜುವೇಂದ್ರ ಚಾಹಲ್..!

ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರನ್ನು ಯುವಕ (ಯಂಗ್‍ಸ್ಟರ್) ಎಂದು ಸ್ಪಿನ್ನರ್ ಯಜುವೇಂದ್ರ ಚಾಹಲ್ ಕಿಚಾಯಿಸಿದ್ದಾರೆ.
ರೋಹಿತ್ ಶರ್ಮಾ-ಚಹಾಲ್
ರೋಹಿತ್ ಶರ್ಮಾ-ಚಹಾಲ್

ಮುಂಬೈ: ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರನ್ನು ಯುವಕ (ಯಂಗ್‍ಸ್ಟರ್) ಎಂದು ಸ್ಪಿನ್ನರ್ ಯಜುವೇಂದ್ರ ಚಾಹಲ್ ಕಿಚಾಯಿಸಿದ್ದಾರೆ.

ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ಎರಡನೇ ಹಾಗೂ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 46 ರನ್ ಗಳಿಂದ ಭಾರತ ಜಯ ಸಾಧಿಸಿತ್ತು. ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.

ಬಾಂಗ್ಲಾ ವಿರುದ್ಧದ ಸರಣಿ ಗೆಲ್ಲಲು ಪ್ರಧಾನ ಪಾತ್ರವಹಿಸಿದ್ದ ವೇಗಿಗಳಾದ ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾ ಅವರನ್ನು ಹಿಟ್ಮನ್ ರೋಹಿತ್ ಶರ್ಮಾ ಅವರು ಬಿಸಿಸಿಐ ಟಿವಿ ಮೂಲಕ ಸಂದರ್ಶನ ಮಾಡಿದ್ದರು. ಈ ವಿಡಿಯೋನ್ನು ಬಿಸಿಸಿಐ ಟ್ವಿಟರ್ ನಲ್ಲಿ ಶೇರ್ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com