ಜನಾಂಗೀಯ ನಿಂದನೆ: ಆರ್ಚರ್ ಬಳಿ ವೈಯಕ್ತಿಕವಾಗಿ ಕ್ಷಮೆಯಾಚಿಸಿದ ಕೀವಿಸ್ ನಾಯಕ ಕೇನ್ ವಿಲಿಯಮ್ಸನ್

ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಐದನೇ ಹಾಗೂ ಕೊನೆಯ ದಿನ ಜನಾಂಗೀಯ ನಿಂದನೆಗೆ ಒಳಗಾಗಿದ್ದ ವೇಗಿ ಜೊಫ್ರಾ ಆರ್ಚರ್ ಅವರ ಬಳಿ ಕಿವೀಸ್ ನಾಯಕ ಕೇನ್ ವಿಲಿಮ್ಸನ್ ವೈಯಕ್ತಿಕವಾಗಿ ಕ್ಷಮೆ ಯಾಚಿಸಿದ್ದಾರೆ.
ಆರ್ಚರ್ ಜೋಫ್ರಾ
ಆರ್ಚರ್ ಜೋಫ್ರಾ

ಅಂಕ್ಲೆಂಡ್: ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಐದನೇ ಹಾಗೂ ಕೊನೆಯ ದಿನ ಜನಾಂಗೀಯ ನಿಂದನೆಗೆ ಒಳಗಾಗಿದ್ದ ವೇಗಿ ಜೊಫ್ರಾ ಆರ್ಚರ್ ಅವರ ಬಳಿ ಕಿವೀಸ್ ನಾಯಕ ಕೇನ್ ವಿಲಿಮ್ಸನ್ ವೈಯಕ್ತಿಕವಾಗಿ ಕ್ಷಮೆ ಯಾಚಿಸಿದ್ದಾರೆ.

ನಿಂದನೆಗೆ ಒಳಗಾದ ಬಗ್ಗೆ ಆರ್ಚರ್ ಟ್ವೀಟ್ ಮಾಡುವ ತನಕ ನಮಗೆ ತಿಳಿದಿರಲಿಲ್ಲ. ಇನ್ನೂ ಮುಂದೆ ಇದು ಮರುಕಳಿಸುವುದಿಲ್ಲ. ಈ ಘಟನೆ ಬಗ್ಗೆ ನಾನು ವೈಯಕ್ತಿಕವಾಗಿ ಕ್ಷಮೆ ಕೋರುತ್ತೇನೆ ಎಂದು ಕೇನ್ ವಿಲಿಯಮ್ಸನ್ ಹೇಳಿದ್ದಾರೆ.

ಇದು ಭಯಾನಕ ಸಂಗತಿ. ನಮ್ಮ ದೇಶ ಬಹುಸಂಸ್ಕøತಿಕ ನಾಡಾಗಿದೆ. ಇನ್ನೂ ಮುಂದೆ ಈ ರೀತಿಯ ಘಟನೆ ಮರುಕಳಿಸುವುದಿಲ್ಲ. ಈ ಬಗ್ಗೆ ಹೆಚ್ಚಿನ ಪ್ರಭಾವ ಬೀರಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com