ಅರ್ಜುನ್ , ಸಾರಾ ಹೆಸರಿನಲ್ಲಿ ನಕಲಿ ಟ್ವಿಟರ್  ಖಾತೆ: ಕೂಡಲೇ ಕ್ರಮಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ಒತ್ತಾಯ

ಅರ್ಜುನ್ ಹಾಗೂ ಸಾರಾ ತೆಂಡೊಲ್ಕರ್ ಹೆಸರಿನಲ್ಲಿರುವ ನಕಲಿ ಟ್ವೀಟರ್ ಖಾತೆಗಳ ಬಗ್ಗೆ ಆಕ್ರೋಶಗೊಂಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ , ಕೂಡಲೇ ಕ್ರಮ ಕೈಗೊಳ್ಳುವಂತೆ  ಟ್ವಿಟರ್ ಇಂಡಿಯಾವನ್ನು ಒತ್ತಾಯಿಸಿದ್ದಾರೆ. 
ಸಚಿನ್ ತೆಂಡೊಲ್ಕರ್ ಕುಟುಂಬ
ಸಚಿನ್ ತೆಂಡೊಲ್ಕರ್ ಕುಟುಂಬ

ಮುಂಬೈ:  ಅರ್ಜುನ್ ಹಾಗೂ ಸಾರಾ ತೆಂಡೊಲ್ಕರ್ ಹೆಸರಿನಲ್ಲಿರುವ ನಕಲಿ ಟ್ವೀಟರ್ ಖಾತೆಗಳ ಬಗ್ಗೆ ಆಕ್ರೋಶಗೊಂಡಿರುವ 
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ , ಕೂಡಲೇ ಕ್ರಮ ಕೈಗೊಳ್ಳುವಂತೆ  ಟ್ವಿಟರ್ ಇಂಡಿಯಾವನ್ನು ಒತ್ತಾಯಿಸಿದ್ದಾರೆ. 

ಸಾರಾ ಹಾಗೂ ಅರ್ಜುನ್ ತೆಂಡೊಲ್ಕರ್ ಹೆಸರಿನ ನಕಲಿ ಟ್ವಿಟರ್ ಖಾತೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸಚಿನ್ ತೆಂಡೊಲ್ಕರ್, "@jr_tendulkar",  ಅರ್ಜುನ್ ಅಧಿಕೃತ ಖಾತೆ ಎನ್ನಲಾಗಿದೆ. ಆದರೆ, ಇದು ನಕಲಿ ಖಾತೆಯಾಗಿದೆ. 2018 ಜೂನ್ ನಿಂದ ಕಾರ್ಯನಿರ್ವಹಿಸುತ್ತಿರುವ ಈ ಖಾತೆಯಲ್ಲಿ ಆಕ್ಷೇಪಾರ್ಹ ಟ್ವೀಟ್ ಗಳನ್ನು ಪೋಸ್ಟ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಅರ್ಜುನ್ ಹಾಗೂ ಪುತ್ರಿ ಸಾರಾ ತೆಂಡೊಲ್ಕರ್  ಟ್ವಿಟರ್ ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿರುವ ಸಚಿನ್ , ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಟ್ವಿಟರ್ ಇಂಡಿಯಾ ಬಳಿ ಮನವಿ ಮಾಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com