ಕೊಹ್ಲಿ ಜೊತೆ ಹೋಲಿಸಬೇಡಿ ಅನ್ನುತ್ತಲೆ 'ವಿರಾಟ್' ದಾಖಲೆ ಮುರಿದ ಬಾಬರ್ ಅಜಾಮ್!

ಪಾಕಿಸ್ತಾನದ ಬಾಬರ್ ಅಜಾಮ್ ಅವರು ವೃತ್ತಿ ಜೀವನದ ಅತಿ ವೇಗವಾಗಿ ಶತಕ ಸಿಡಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎಂಬ ಸಾಧನೆಗೆ ಭಾಜನರಾಗಿದ್ದಾರೆ. ಜತೆಗೆ, ಈ ಸಾಧನೆ ಮಾಡಿ ಮೂರನೇ ಸ್ಥಾನದಲ್ಲಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಅಜಾಮ್ ಹಿಂದಿಕ್ಕಿದರು.
ಬಾಬರ್ ಅಜಾಮ್-ವಿರಾಟ್ ಕೊಹ್ಲಿ
ಬಾಬರ್ ಅಜಾಮ್-ವಿರಾಟ್ ಕೊಹ್ಲಿ

ಕರಾಚಿ: ಪಾಕಿಸ್ತಾನದ ಬಾಬರ್ ಅಜಾಮ್ ಅವರು ವೃತ್ತಿ ಜೀವನದ ಅತಿ ವೇಗವಾಗಿ ಶತಕ ಸಿಡಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎಂಬ ಸಾಧನೆಗೆ ಭಾಜನರಾಗಿದ್ದಾರೆ. ಜತೆಗೆ, ಈ ಸಾಧನೆ ಮಾಡಿ ಮೂರನೇ ಸ್ಥಾನದಲ್ಲಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಅಜಾಮ್ ಹಿಂದಿಕ್ಕಿದರು.

ಸೋಮವಾರ ಶ್ರೀಲಂಕಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ  ಅಜಾಮ್ ಈ ದಾಖಲೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಪಾಕಿಸ್ತಾನ 67 ರನ್‌ಗಳಿಂದ ಜಯ ಸಾಧಿಸಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆೆ 305 ರನ್ ದಾಖಲಿಸಿತ್ತು. ಬಾಬರ್ ಅಜಾಮ್ ಅವರು 105 ಎಸೆತಗಳಲ್ಲಿ 115 ರನ್ ಗಳಿಸಿ ವೃತ್ತಿ ಜೀವನದ 11ನೇ ಶತಕ ಪೂರೈಸಿದರು. ಬಳಿಕ ಗುರಿ ಹಿಂಬಾಲಿಸಿದ ಶ್ರೀಲಂಕಾ 46.5 ಓವರ್‌ಗಳಲ್ಲಿ 238 ರನ್‌ಗಳಿಗೆ ಆಲ್ ಔಟ್ ಆಯಿತು.

ಬಾಬರ್ ಅಜಾಮ್ ಅವರು 11 ಶತಕ ಸಿಡಿಸಲು ಏಕದಿನ ಪಂದ್ಯದ 71 ಇನಿಂಗ್ಸ್‌‌ಗಳನ್ನು ತೆಗೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಮಾಜಿ ಆರಂಭಿಕ ಹಾಶಿಂ ಆಮ್ಲಾ ಅವರು 64 ಇನಿಂಗ್ಸ್‌‌ಗಳಲ್ಲಿ ತಿ ವೇಗವಾಗಿ 11 ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌‌ಮನ್ ಆಗಿದ್ದಾರೆ. ಸಹ ಆಟಗಾರ ಡಿ ಕಾಕ್ ಅವರು 65 ಇನಿಂಗ್ಸ್‌‌ಗಳಲ್ಲಿ 11 ಶತಕ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ. 

ಇದೀಗ ಬಾಬರ್ ಅಜಾಮ್ ಅವರು, 82 ಇನಿಂಗ್ಸ್‌‌ಗಳಲ್ಲಿ 11 ಶತಕ ಸಿಡಿಸಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ಸಾವಿರ ರನ್ ಪೂರೈಸಿದ ಪಾಕಿಸ್ತಾನದ ಮೊದಲ ಬ್ಯಾಟ್ಸ್‌ ಮನ್ ಎಂಬ ಸಾಧನೆಯನ್ನೂ ಇದೇ ಪಂದ್ಯದಲ್ಲಿ ಬಾಬರ್ ಮಾಡಿದರು. ಆ ಮೂಲಕ ಪಾಕಿಸ್ತಾನದ ಮಾಜಿ ಆಟಗಾರ ಜಾವೇದ್ ಮಿಯಾಂದೆದ್ ಅವರ ದಾಖಲೆಯನ್ನು ಹಿಂದಿಕ್ಕಿದರು.

ಬಾಬರ್ ಅಜಾಮ್ ಸಾವಿರ ರನ್ ಪೂರೈಸಲು 19 ಇನಿಂಗ್ಸ್‌ ತೆಗೆದುಕೊಂಡಿದ್ದಾರೆ. ಆದರೆ, ಜಾವೇದ್ 1987ರಲ್ಲಿ 21 ಇನಿಂಗ್ಸ್‌ ತೆಗೆದುಕೊಂಡಿದ್ದರು. ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಮೂರನೇ ಏಕದಿನ ಪಂದ್ಯ ನಾಳೆ ನಡೆಯಲಿದೆ.

ಈ ಹಿಂದೆ ಬಾಬರ್ ಅಜಾನ್ ನನ್ನು ವಿರಾಟ್ ಕೊಹ್ಲಿಗೆ ಹೋಲಿಸಲಾಗುತ್ತಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಜಾಮ್ ನಾವಿಬ್ಬರು ವಿಭಿನ್ನ ರೀತಿಯ ಆಟಗಾರರಾಗಿದ್ದು ಹೋಲಿಕೆ ಮಾಡಬಾರದು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com