ದಿವಾಳಿ ಪಾಕ್‌ಗೆ ಫ್ಲಡ್ ಲೈಟ್ ಸರಿ ಮಾಡೋಕೆ ದಿಕ್ಕಿಲ್ಲ; ಲಂಕಾ ಪಂದ್ಯದ ವೇಳೆ ಮುಜುಗರ, ಟ್ರೋಲ್!

ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವೆ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಪಾಕ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡಾಗಿದ್ದು ದಿವಾಳಿ ಪಾಕ್‌ಗೆ ಫ್ಲಡ್ ಲೈಟ್ ಸರಿ ಮಾಡೋಕೆ ದಿಕ್ಕಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಪಾಕಿಸ್ತಾನ
ಪಾಕಿಸ್ತಾನ

ಇಸ್ಲಾಮಾಬಾದ್: ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವೆ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಪಾಕ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡಾಗಿದ್ದು ದಿವಾಳಿ ಪಾಕ್‌ಗೆ ಫ್ಲಡ್ ಲೈಟ್ ಸರಿ ಮಾಡೋಕೆ ದಿಕ್ಕಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ. 

ಕರಾಚಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದ ವೇಳೆ ಸರಿ ಸುಮಾರು 26 ನಿಮಿಷಗಳ ಕಾಲ ಫ್ಲಡ್ ಲೈಟ್ ಕೈ ಕೊಟ್ಟಿತ್ತು. ಮೊದಲೆ ಪಂದ್ಯಕ್ಕೆ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿತ್ತು. ಇದರ ನಡುವೆ ಲೈಟ್ಸ್ ಕೈಕೊಟ್ಟಿದ್ದರಿಂದ ಪಂದ್ಯವನ್ನು ಕೆಲ ಸಮಯ ನಿಲ್ಲಿಸಲಾಗಿತ್ತು. ಇದರಿಂದ ಕ್ರೀಡಾಂಗಣದಲ್ಲಿದ್ದ ಕೆಲ ಪ್ರೇಕ್ಷಕರು ಹಿಡಿ ಶಾಪ ಹಾಕಿದರು. 

ಇನ್ನು ನೆಟಿಗರು ಈ ಕುರಿತು ಟ್ರೋಲ್ ಮಾಡುತ್ತಿದ್ದಾರೆ. 10 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಕ್ರಿಕೆಟ್ ವಾಪಸಾಗಿದೆ. ಆದರೆ ಖಾಲಿ ಸ್ಟೇಡಿಯಂ ಹಾಗೂ ಫ್ಲಡ್ ಲೈಟ್ ಸಮಸ್ಯೆ ಸ್ವಾಗತ ನೀಡಿತು ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಕೆಲವರು ದಶಕದ ನಂತರ ಪಂದ್ಯ ನಡೆಯುತ್ತಿದೆ. ಹೀಗಾಗಿ ಸಮಸ್ಯೆಗಳು ಎದುರಾಗುವುದು ಸಾಮಾನ್ಯ ಎಂದಿದ್ದಾರೆ. 

ಲಂಕಾ ವಿರುದ್ಧ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಎರಡನೇ ಪಂದ್ಯದಲ್ಲಿ ಪಾಕ್ 67 ರನ್ ಗಳಿಂದ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ್ದ ಪಾಕ್ 305 ರನ್ ಪೇರಿಸಿತ್ತು. 306 ರನ್ ಗುರಿ ಬೆನ್ನಟ್ಟಿದ ಶ್ರೀಲಂಕಾ 238 ರನ್ ಗಳಿಂದ ಆಲೌಟ್ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com