ಐಪಿಎಲ್ 2020: ಬೆಂಗಳೂರು ಬದಲಿಗೆ ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ, ಡಿಸೆಂಬರ್ 19ಕ್ಕೆ ಮಹೂರ್ತ ಫಿಕ್ಸ್

ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ ಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಇದೇ ಮೊದಲ ಬಾರಿಗೆ ಕೋಲ್ಕತ್ತಾದಲ್ಲಿ  ಡಿಸೆಂಬರ್ 19 ರಂದು ನಡೆಯಲಿದೆ. ಇದುವರೆಗೆ ಐಪಿಎಲ್ ಹರಾಜು ಪ್ರಕ್ರಿಯೆ ಬಹುತೇಕ ಬೆಂಗಳೂರಿನಲ್ಲಿ ನಡೆಯುತ್ತಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ ಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಇದೇ ಮೊದಲ ಬಾರಿಗೆ ಕೋಲ್ಕತ್ತಾದಲ್ಲಿ  ಡಿಸೆಂಬರ್ 19 ರಂದು ನಡೆಯಲಿದೆ. ಇದುವರೆಗೆ ಐಪಿಎಲ್ ಹರಾಜು ಪ್ರಕ್ರಿಯೆ ಬಹುತೇಕ ಬೆಂಗಳೂರಿನಲ್ಲಿ ನಡೆಯುತ್ತಿತ್ತು.

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾ ಬಾಲಿವುಡ್ ನಟ ಶಾರುಖ್ ಖಾನ್ ಮಾಲಿಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ನೆಲೆಯಾಗಿದೆ.

ಐಪಿಎಲ್ ಹರಾಜಿನ ಕುರಿತಂತೆ ಎಲ್ಲಾ ಫ್ರಾಂಚೈಸಿಗಳಿಗೆ ಸೋಮವಾರ ತಿಳಿಸಲಾಗಿದೆ ಎಂದು 'ಇಎಸ್‌ಪಿಎನ್‌ಕ್ರಿನ್‌ಫೊ' ವರದಿ ಮಾಡಿದೆ.

ಫ್ರಾಂಚೈಸಿಗಳಿಗೆ ತಲಾ 82 ಕೋಟಿ

2020ರ ಋತುವಿನ ಐಪಿಎಲ್ ಗೆ ತಮ್ಮ ತಂಡಗಳನ್ನು ರಚಿಸಲು ಫ್ರಾಂಚೈಸಿಗಳಿಗೆ ಮೂಲಧ  85 ಕೋಟಿ ರೂ. ನೀಡಲಾಗಿದೆ. ಪ್ರತಿ ಫ್ರ್ಯಾಂಚೈಸ್‌ಗೆ ಕಳೆದ ಹರಾಜಿನಿಂದ  ಉಳಿದ ಹಣದೊಂದಿಗೆ ಹೆಚ್ಚುವರಿ ಮೂರು ಕೋಟಿ ರೂ.ನಿಡಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಅತಿದೊಡ್ಡ ಬಾಕಿ - 8.2 ಕೋಟಿ ರೂ ಉಳಿಸಿಕೊಂಡಿದ್ದರೆ ರಾಜಸ್ಥಾನ್ ರಾಯಲ್ಸ್ 7.15 ಕೋಟಿ ಮತ್ತು ಕೋಲ್ಕತಾ ನೈಟ್ ರೈಡರ್ಸ್ 6.05 ಕೋಟಿ ರೂ. ಬಾಕಿ ಉಳಿಸಿದೆ.ಮುಂದಿನ ವರ್ಷ ಫ್ರಾಂಚೈಸಿಗಳು ತಂಡಗಳನ್ನು ವಿಸರ್ಜಿಸುವ ಮುನ್ನ ನಡೆಯುತ್ತಿರುವ ಕಡೆಯ ಹರಾಜು ಇದಾಗಿದ್ದು  2021 ರಿಂದ ಮೆಗಾ ಹರಾಜಿನಲ್ಲಿ ಹೊಸ ತಂಡಗಳನ್ನು ರಚಿಸಲು ಸಿದ್ದವಾಗಿವೆ.

ಐಪಿಎಲ್ 2020 ಹರಾಜಿಗೆ ಮುಂಚಿತವಾಗಿ ಫ್ರ್ಯಾಂಚೈಸ್‌ಗಳೊಂದಿಗೆ ಉಳಿದಿರುವ ಹಣದ ಮೊತ್ತ ಹೀಗಿದೆ-

ಚೆನ್ನೈ ಸೂಪರ್ ಕಿಂಗ್ಸ್ - 3.2 ಕೋಟಿ ರೂ
ಡೆಲ್ಲಿ ಕ್ಯಾಪಿಟಲ್ಸ್ - 7.7 ಕೋಟಿ ರೂ
ಕಿಂಗ್ಸ್ ಇಲೆವೆನ್ ಪಂಜಾಬ್ - 3.7 ಕೋಟಿ ರೂ
ಕೋಲ್ಕತಾ ನೈಟ್ ರೈಡರ್ಸ್ - 6.05 ಕೋಟಿ ರೂ
ಮುಂಬೈ ಇಂಡಿಯನ್ಸ್ - 3.55 ಕೋಟಿ ರೂ
ರಾಜಸ್ಥಾನ್ ರಾಯಲ್ಸ್ - 7.15 ಕೋಟಿ ರೂ
ರಾಯಲ್ ಚಾಲೆಂಜರ್ಸ್ ಬೆಂಗಳೂರು - 1.80 ಕೋಟಿ ರೂ
ಸನ್‌ರೈಸರ್ಸ್ ಹೈದರಾಬಾದ್ - 5.30 ಕೋಟಿ ರೂ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com