ಭಾರತ - ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌: ಆರಂಭಿಕನಾಗಿ ಚೊಚ್ಚಲ ಶತಕ ಸಿಡಿಸಿದ ರೋಹಿತ್ ಶರ್ಮಾ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಆರಂಭಿನಾಗಿ ಆಡಿದ ಚೊಚ್ಚಲ ಇನಿಂಗ್ಸ್‌‌ನಲ್ಲಿಯೇ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಶತಕ ಬಾರಿಸಿದರು. ಆ ಮೂಲಕ ಆರಂಭಿಕನಾಗಿ ಆಡಿದ ಮೊದಲನೇ ಇನಿಂಗ್ಸ್‌‌ನಲ್ಲಿಯೇ ಶತಕ ಸಿಡಿಸಿದ...
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ವಿಶಾಖಪಟ್ಟಣಂ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಆರಂಭಿನಾಗಿ ಆಡಿದ ಚೊಚ್ಚಲ ಇನಿಂಗ್ಸ್‌‌ನಲ್ಲಿಯೇ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಶತಕ ಬಾರಿಸಿದರು. ಆ ಮೂಲಕ ಆರಂಭಿಕನಾಗಿ ಆಡಿದ ಮೊದಲನೇ ಇನಿಂಗ್ಸ್‌‌ನಲ್ಲಿಯೇ ಶತಕ ಸಿಡಿಸಿದ ಭಾರತದ ನಾಲ್ಕನೇ ಬ್ಯಾಟ್ಸ್‌‌ಮನ್ ಎಂಬ ಗೌರವಕ್ಕೆ ಪಾತ್ರರಾದರು ಮತ್ತು ವೃತ್ತಿ ಜೀವನದ ನಾಲ್ಕನೇ ಶತಕ ಪೂರೈಸಿದರು.

ಇಲ್ಲಿನ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, 58 ಓವರ್‌ಗಳಿಗೆ ವಿಕೆಟ್ ನಷ್ಟವಿಲ್ಲದೇ 202 ರನ್ ಗಳಿಸಿದ್ದು, ಮಳೆಯಿಂದಾಗಿ ಪಂದ್ಯ ವಿಳಂಬವಾಗುತ್ತಿದೆ.

ಸೀಮಿತ ಓವರ್‌ಗಳ ಮಾದರಿಯಲ್ಲಿ ಈಗಾಗಲೇ ಭಾರತ ತಂಡದ ಆರಂಭಿಕನಾಗಿ ನೆಲೆಯೂರಿರುವ ರೋಹಿತ್ ಶರ್ಮಾ, ಅವರು ಟೆಸ್ಟ್‌ ಕ್ರಿಕೆಟ್ ನಲ್ಲಿ ಹೇಳಿಕೊಳ್ಳುವಂತ ಸಾಧನೆ ಮಾಡಿರಲಿಲ್ಲ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಜತೆ ಆರಂಭಿಕನಾಗಿ ಮೊಟ್ಟ ಮೊದಲ ಬಾರಿ ಆಡಿದ ರೋಹಿತ್ ಅಮೋಘ ಬ್ಯಾಟಿಂಗ್ ಮಾಡಿದರು. 173 ಎಸೆತಗಳನ್ನು ಎದುರಿಸಿದ ಅವರು 115 ರನ್ ಗಳಿಸಿದರು. ಆ ಮೂಲಕ ವೃತ್ತಿ ಜೀವನದ ನಾಲ್ಕನೇ ಶತಕ ಸಿಡಿಸಿದರು. ಜತೆಗೆ, ಆರಂಭಿಕನಾಗಿ ಆಡಿದ ಟೆಸ್ಟ್‌ ಮೊದಲನೇ ಇನಿಂಗ್ಸ್‌‌ನಲ್ಲಿಯೇ ಶತಕ ಸಿಡಿಸಿದ ನಾಲ್ಕನೇ ಬ್ಯಾಟ್ಸ್‌‌ಮ್ಯಾನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಭೋಜನದ ಬಳಿಕವೂ ಎದುರಾಳಿ ಬೌಲರ್‌ಗಳನ್ನು ಬೆಂಡೆತ್ತುವುದನ್ನು ಮುಂದುವರಿಸಿದ ರೋಹಿತ್‌, 160 ಎಸೆತಗಳಲ್ಲಿ 100 ರನ್‌ಗಳನ್ನು ಪೂರೀಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com