ಪಾಕ್ ಫೀಲ್ಡರ್ ಥ್ರೋ ಕಂಡು ಪೆಚ್ಚಾಗಿ ನಿಂತ ಕ್ಯಾಪ್ಟನ್; ನಗೆಗೀಡಾದ ಪಾಕ್, ವಿಡಿಯೋ ವೈರಲ್!

ಪಾಕ್ ಕ್ರಿಕೆಟಿಗರು ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸಿ ಕ್ರಿಕೆಟ್ ವಲಯದಲ್ಲಿ ನಗೆಗೀಡಾಗುತ್ತಾರೆ. 1 ರನ್ ಕೊಡುವ ಜಾಗದಲ್ಲಿ 5 ರನ್ ಕೊಟ್ಟಿದ್ದು ಪಾಕ್ ಫೀಲ್ಡರ್ ಎಸೆದ ಥ್ರೋ ಕಂಡು ಸ್ವತಃ ತಂಡದ ನಾಯಕ ಸರ್ಫರಾಜ್ ಅಹ್ಮದ್ ಪೆಚ್ಚಾಗಿ ನಿಂತ ವಿಡಿಯೋ ಇದೀಗ ವೈರಲ್ ಆಗಿದ್ದು ನೆಟಿಗರು ಫನ್ನಿ ಕಮೆಂಟ್ ಮಾಡುತ್ತಿದ್ದಾರೆ.
ಪಾಕ್ ಫೀಲ್ಡರ್ಸ್
ಪಾಕ್ ಫೀಲ್ಡರ್ಸ್

ಇಸ್ಲಾಮಾಬಾದ್: ಪಾಕ್ ಕ್ರಿಕೆಟಿಗರು ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸಿ ಕ್ರಿಕೆಟ್ ವಲಯದಲ್ಲಿ ನಗೆಗೀಡಾಗುತ್ತಾರೆ. 1 ರನ್ ಕೊಡುವ ಜಾಗದಲ್ಲಿ 5 ರನ್ ಕೊಟ್ಟಿದ್ದು ಪಾಕ್ ಫೀಲ್ಡರ್ ಎಸೆದ ಥ್ರೋ ಕಂಡು ಸ್ವತಃ ತಂಡದ ನಾಯಕ ಸರ್ಫರಾಜ್ ಅಹ್ಮದ್ ಪೆಚ್ಚಾಗಿ ನಿಂತ ವಿಡಿಯೋ ಇದೀಗ ವೈರಲ್ ಆಗಿದ್ದು ನೆಟಿಗರು ಫನ್ನಿ ಕಮೆಂಟ್ ಮಾಡುತ್ತಿದ್ದಾರೆ.

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಲಂಕಾ ಬ್ಯಾಟ್ಸ್ ಮನ್ ಗಳು ಸಿಂಗಲ್ ರನ್ ಪಡೆಯಲು ಮುಂದಾದರೂ ಈ ವೇಳೆ ಪಾಕ್ ಫೀಲ್ಡರ್ ಡೈವ್ ಮಾಡಿ ಚೆಂಡನ್ನು ಕೀಪರ್ ಕಡೆಗೆ ಎಸೆದರು. ಚೆಂಡು ಕೀಪರ್ ನಿಂದ ದೂರ ಹೋಯಿತು. 

ಈ ವೇಳೆ ಆಫ್ ಫೀಲ್ಡ್ ನಲ್ಲಿದ್ದ ಫೀಲ್ಡರ್ಸ್ ಸಹ ಡೈವ್ ಮಾಡಿ ಚೆಂಡನ್ನು ಹಿಡಿಯಲು ಮುಂದಾದರೂ ಚೆಂಡು ಅವರ ಕೈಗೆ ಸಿಗಲಿಲ್ಲ. ಇನ್ನು ಬೌಂಡರಿ ಗೆರೆಯಲ್ಲಿ ಮತ್ತೊಬ್ಬ ಫೀಲ್ಡರ್ಸ್ ಸಹ ಚೆಂಡನ್ನು ಹಿಡಿಯಲು ವಿಫಲವಾಗಿ ಚೆಂಡು ಬೌಂಡರಿ ಸೇರಿತು. 

ಇನ್ನು ಸಿಂಗಲ್ ರನ್ ಹೋಗೋ ಜಾಗದಲ್ಲಿ ಪಾಕ್ ಆಟಗಾರರೇ 5 ರನ್ ನೀಡಿದರು ಎಂದು ಟ್ರೋಲಿಗರು ಫನ್ನಿ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com