ಪಂದ್ಯ 1, ಸಿಕ್ಸರ್ 10: ಹಿಟ್ ಮ್ಯಾನ್ ರೋಹಿತ್ ಶರ್ಮಾ ಹೊಸ ವಿಶ್ವದಾಖಲೆ

ಏಕೈಕ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌‌ಗಳಲ್ಲಿ ಶತಕ ಸಿಡಿಸಿದ ಭಾರತದ ಎರಡನೇ ಆರಂಭಿಕ ಬ್ಯಾಟ್ಸ್‌‌ಮನ್ ಎಂಬ ಸಾಧನೆಗೆ ಹಿಟ್‌ಮನ್ ರೋಹಿತ್ ಶರ್ಮಾ ಶನಿವಾರ ಭಾಜನರಾದರು. 
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿದ ಅಪರೂಪದ ಸಾಧಕ

ವಿಶಾಖಪಟ್ಟಣಂ: ಏಕೈಕ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌‌ಗಳಲ್ಲಿ ಶತಕ ಸಿಡಿಸಿದ ಭಾರತದ ಎರಡನೇ ಆರಂಭಿಕ ಬ್ಯಾಟ್ಸ್‌‌ಮನ್ ಎಂಬ ಸಾಧನೆಗೆ ಹಿಟ್‌ಮನ್ ರೋಹಿತ್ ಶರ್ಮಾ ಶನಿವಾರ ಭಾಜನರಾದರು.

ಇಲ್ಲಿನ ಡಾ.ವೈ.ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನ ಈ ಸಾಧನೆಯನ್ನು ರೋಹಿತ್ ಶರ್ಮಾ ಮಾಡಿದ್ದಾರೆ.

ಈ ಶತಕದೊಂದಿಗೆ ಮೊದಲನೇ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌‌ಗಳಲ್ಲಿ ಎರಡೂ ಶತಕ ಸಿಡಿಸಿದ ಭಾರತದ ಮೊದಲ ಆರಂಭಿಕ ಬ್ಯಾಟ್ಸ್‌‌ಮನ್ ಎನಿಸಿಕೊಂಡರು. ಎರಡನೇ ಇನಿಂಗ್ಸ್‌‌ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಅವರು 149 ಎಸೆತಗಳಲ್ಲಿ ಏಳು ಸಿಕ್ಸರ್ 10 ಬೌಂಡರಿಯೊಂದಿಗೆ 127 ರನ್ ಗಳಿಸಿದ ವೃತ್ತಿ ಜೀವನದ ಐದನೇ ಶತಕ ಪೂರೈಸಿದರು. 

ಇದಕ್ಕೂ ಮುನ್ನ ಪ್ರಥಮ ಇನಿಂಗ್ಸ್‌‌ನಲ್ಲಿ ಹಿಟ್‌ಮನ್ 244 ಎಸೆತಗಳಲ್ಲಿ ಆರು ಸಿಕ್ಸರ್ ಹಾಗೂ 23 ಬೌಂಡರಿಯೊಂದಿಗೆ 176 ರನ್ ಸಿಡಿಸಿದ್ದರು. ಎರಡೂ ಇನಿಂಗ್ಸ್‌‌ಗಳಲ್ಲಿ ಶತಕ ಸಿಡಿಸಿದ ಭಾರತದ ಆರನೇ ಬ್ಯಾಟ್ಸ್‌‌ಮನ್ ಎಂಬ ಗೌರವಕ್ಕೆೆ ಭಾಜನರಾಗಿದ್ದಾರೆ. 

ಕೆ.ಎಲ್ ರಾಹುಲ್ ಅವರ ಆರಂಭಿಕ ಸ್ಥಾನಕ್ಕೆೆ ಚೊಚ್ಚಲ ಪದಾರ್ಪಣೆ ಮಾಡಿದ್ದ ರೋಹಿತ್ ಮೊದಲ ಪಂದ್ಯದಲ್ಲೇ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 200 ವಿಕೆಟ್ ಕಿತ್ತ ವಿಶ್ವದ ಮೊದಲ ಎಡಗೈ ಬೌಲರ್ ಎಂಬ ಸಾಧನೆಯನ್ನು ರವೀಂದ್ರ ಜಡೇಜಾ ಶುಕ್ರವಾರ ಮಾಡಿದ್ದರು. 

ಒಟ್ಟಾರೆ, ಭಾರತ ತಂಡ ದ್ವಿತೀಯ ಇನಿಂಗ್ಸ್‌‌ನಲ್ಲಿ 67 ಓವರ್‌ಗಳಿಗೆ ನಾಲ್ಕು ವಿಕೆಟ್ ನಷ್ಟಕ್ಕೆೆ 323 ರನ್ ಗಳಿಸಿದ್ದು, ಪ್ರವಾಸಿ ದಕ್ಷಿಣ ಆಫ್ರಿಕಕ್ಕೆೆ 395 ರನ್ ಗುರಿ ನೀಡಿತು. ರೋಹಿತ್ ಶರ್ಮಾ ಅವರ ಜತೆಗೆ ಉತ್ತಮ ಬ್ಯಾಟಿಂಗ್ ಮಾಡಿದ್ದ ಚೇತೇಶ್ವರ ಪೂಜಾರ 81 ರನ್, ರವೀಂದ್ರ ಜಡೇಜಾ 40 ರನ್, ವಿರಾಟ್ ಕೊಹ್ಲಿ ಅಜೇಯ 31 ಹಾಗೂ ರಹಾನೆ ಅಜೇಯ 27 ರನ್ ಗಳಿಸಿದರು.

ನಾಲ್ಕನೇ ದಿನ: ಟೀಂ ಇಂಡಿಯಾ ಮೇಲುಗೈ

ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ನಾಲ್ಕನೇ ದಿನದಾಟದ ಅಂತ್ಯಕ್ಕೆ  ಟೀಮ್ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ  67 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 323 ರನ್‌ ಬೃಹತ್ ಮೊತ್ತ ಕಲೆ ಹಾಕಿದೆ. ರೋಹಿತ್ ಶರ್ಮಾ ಶತಕ (127), ಚೇತೇಶ್ವರ ಪೂಜಾರ ಅರ್ಧಶತಕ (81) ಸೇರಿಸುವ ಮೂಲಕ ಟಿಂ ಇಂಡಿಯಾ ಈ ಮೊತ್ತ ಕಲೆಹಾಲೌ ಪ್ರಮುಖ ಕಾರಣೀಕರ್ತರಾದರು.

ಇನ್ನು ಪಂದ್ಯ ಗೆಲ್ಲಲು ಹರಿಣಗಳಿಗೆ 395 ರನ್ ಅಗತ್ಯವಿದ್ದು ಮೊದಲ ಟೆಸ್ಟ್ ಬಹುತೇಕ ಭಾರತದ ಬಿಗಿ ಹಿಡಿತದಲ್ಲಿದೆ.

ನಾಲ್ಕನೇ ದಿನದಂತ್ಯಕ್ಕೆ ಗುರಿ ಬೆನ್ನತ್ತಿದ ಹರಿಣ ಪಡೆ ಒಂದು ವಿಕೆಟ್ ಕಳೆದುಕೊಂಡು 11 ರನ್ ಗಳಿಸಿದೆ.ಆದರೆ ನಾಳೆ ಪಂದ್ಯದ ಕಡೇ ದಿನವಾಗಿದ್ದು ಒಂಬತ್ತು ವಿಕೆಟ್ ಗಳಿದ್ದು ಗೆಲುವಿಗೆ 384 ರನ್ ಬೇಕಿದೆ.ಆಫ್ರಿಕಾ ಪಾಲಿಗೆ ಜಯ ಸಾಧ್ಯವಿಲ್ಲದ ಕಾರಣ ಅವರು ಡ್ರಾ ಸಾಧಿಸುವತ್ತ ಹೆಚ್ಚು ಲಕ್ಷ ನೀಡಿದ್ದಾರೆ ಎನ್ನಲಾಗಿದೆ. ಈ ನಡುವೆ ಟೀಂ ಇಂಡಿಯಾ ತಾನು ಪಂದ್ಯದ ಗೆಲುವಿಗೆ ಸರ್ವ ರೀತಿಯಲ್ಲಿಯೂ ಪ್ರಯತ್ನ ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com