ಮೊಹಮ್ಮದ್ ಶಮಿ ರಿವರ್ಸ್ ಸ್ವಿಂಗ್ ಚತುರ- ರೋಹಿತ್ ಶರ್ಮಾ

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವಿಗೆ ನೆರವಾದ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರನ್ನು ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಶ್ಲಾಘಿಸಿದ್ದಾರೆ.
ಮೊಹಮ್ಮದ್ ಶಮಿ, ರೋಹಿತ್ ಶರ್ಮಾ
ಮೊಹಮ್ಮದ್ ಶಮಿ, ರೋಹಿತ್ ಶರ್ಮಾ

ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವಿಗೆ ನೆರವಾದ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರನ್ನು ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಶ್ಲಾಘಿಸಿದ್ದಾರೆ.

ಡಾ. ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಐದನೇ ದಿನವಾದ ಇಂದು ದಕ್ಷಿಣ ಆಫ್ರಿಕಾ ಗೆಲುವಿಗೆ 384 ರನ್ ಗಳು ಅಗತ್ಯವಿತ್ತು. ಆದರೆ, ಮೊಹಮ್ಮದ್ ಶಮಿ ಮಾರಕ ದಾಳಿಗೆ ನಲುಗಿದ ಹರಿಣಗಳು ಕೇವಲ 191 ರನ್‌ಗಳಿಗೆ ಸರ್ವ ಪತನವಾಯಿತು.

 ಶಮಿ ಐದು ವಿಕೆಟ್ ಗೊಂಚಲು ಪಡೆದಿದ್ದರು. ಭಾರತ ತಂಡ 203 ರನ್‌ಗಳಿಂದ ಗೆಲುವು ಸಾಧಿಸಿತು. ಆ ಮೂಲಕ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕೊಹ್ಲಿ ಪಡೆ 1-0 ಮುನ್ನಡೆ ಸಾಧಿಸಿತು.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ,‘‘ನಿಧಾನಗತಿಯ ಪಿಚ್‌ಗಳಲ್ಲಿ ಮೊಹಮ್ಮದ್ ಶಮಿ ಅವರ ರಿವರ್ಸ್ ಸ್ವಿಂಗ್  ತಂಡಕ್ಕೆೆ ವರದಾನವಾಗಿದೆ. ಈ ಪಂದ್ಯದಲ್ಲಿ ಅಲ್ಲದೇ, ಈ ಹಿಂದೆ ಹಲವು ಪಂದ್ಯಗಳಲ್ಲಿ ಶಮಿ ಅವರ ಬೌಲಿಂಗ್ ನೋಡಿದ್ದೇವೆ. 2013ರಲ್ಲಿ ನಾವಿಬ್ಬರು ಒಂದೇ ವೇಳೆ  ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದೆವು. ಈಡೆನ್ ಗಾರ್ಡನ್ ಪಿಚ್  ಆಗ ಇದಕ್ಕಿಂತ  ವಿಭಿನ್ನವಾಗಿತ್ತು. ನಾಲ್ಕು ಹಾಗೂ ಐದನೇ ದಿನ ಹೆಚ್ಚು ನಿಧಾನಗತಿಯಿಂದ ಕೂಡಿತ್ತು. ಆ ವೇಳೆಯೂ ಶಮಿ ರಿವರ್ಸ್ ಸ್ವಿಂಗ್  ಮಾಡಿದ್ದರು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com