ವೈಜಾಗ್ ಟೆಸ್ಟ್ :  ವಿಶ್ವ ದಾಖಲೆಯ 36 ಸಿಕ್ಸರ್ !

ಡಾ.ವೈ.ಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ  ಹೆಚ್ಚು ಸಿಕ್ಸರ್ ನಿಂದಾಗಿ ನೂತನ ವಿಶ್ವದಾಖಲೆ ನಿರ್ಮಿಸಲಾಗಿದೆ. 
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ವಿಶಾಖಪಟ್ಟಣಂ: ಡಾ.ವೈ.ಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ  ಹೆಚ್ಚು ಸಿಕ್ಸರ್ ನಿಂದಾಗಿ ನೂತನ ವಿಶ್ವದಾಖಲೆ ನಿರ್ಮಿಸಲಾಗಿದೆ.

ರವೀಂದ್ರ ಜಡೇಜಾ ಅವರ ಓವರ್ ನಲ್ಲಿ ಡೇನ್ ಪೀಡ್  ಸಿಕ್ಸರ್ ಬಾರಿಸುವ ಮೂಲಕ  ಐದನೇ ದಿನಾದಟದಲ್ಲಿ ಮೊದಲ ಟೆಸ್ಟ್ ಪಂದ್ಯದ 36ನೇ ಸಿಕ್ಸರ್  ಸಿಡಿಸಿ ವಿಶ್ವ ದಾಖಲೆಗೆ ಕಾರಣರಾದರು.ಈ ಹಿಂದೆ ನವೆಂಬರ್ 2014ರಲ್ಲಿ ಶಾರ್ಜಾದಲ್ಲಿ ನಡೆದ ನ್ಯೂಜಿಲ್ಯಾಂಡ್ ಪಾಕಿಸ್ತಾನ ನಡುವಣ ಪಂದ್ಯದಲ್ಲಿ 35  ಸಿಕ್ಸರ್ ಸಿಡಿಸಿ ದಾಖಲೆ ಮಾಡಲಾಗಿತ್ತು. 

 ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ13 ಸಿಕ್ಸರ್ ಬಾರಿಸಿ 1996ರಲ್ಲಿ ಜಿಂಬಾಬ್ವೆ ವಿರುದ್ಧ ವಾಸಿಂ ಅಕ್ರಮ್ ಗಳಿಸಿದ್ದ 12 ಸಿಕ್ಸರ್ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com