ವೀರ್ಯದಾನ ಮಾಡಲು ಹೃತಿಕ್‌ಗೆ ಮಹಿಳಾ ಕ್ರಿಕೆಟರ್ ಸಲಹೆ !

ಬಾಲಿವುಡ್ ಅಂದಗಾರ ಹೃತಿಕ್ ರೋಷನ್ ಅವರಿಗೆ ಓರ್ವ ಮಹಿಳಾ ಕ್ರಿಕೆಟರ್ ನೀಡಿರುವ ಉಚಿತ ಸಲಹೆ ವೈರಲ್ ಆಗಿದೆ. ಗ್ರೀಕ್ ವೀರನಂತಿರುವ ಹೃತಿಕ್ ರೋಷನ್ ಅವರು ವೀರ್ಯದಾನ ಮಾಡಬೇಕು ಎಂದು ತಮಿಳುನಾಡಿಗೆ ಸೇರಿದ ಮಹಿಳಾ ಕ್ರಿಕೆಟರ್ ಭಾವನ ಸಾಮಾಜಿಕ ಮಾಧ್ಯಮ ಮೂಲಕ ಸಲಹೆ ನೀಡಿದ್ದಾರೆ.
ಹೃತಿಕ್ ರೋಷನ್
ಹೃತಿಕ್ ರೋಷನ್

ಚೆನ್ನೈ: ಬಾಲಿವುಡ್ ಅಂದಗಾರ ಹೃತಿಕ್ ರೋಷನ್ ಅವರಿಗೆ ಓರ್ವ ಮಹಿಳಾ ಕ್ರಿಕೆಟರ್ ನೀಡಿರುವ ಉಚಿತ ಸಲಹೆ ವೈರಲ್ ಆಗಿದೆ. ಗ್ರೀಕ್ ವೀರನಂತಿರುವ ಹೃತಿಕ್ ರೋಷನ್ ಅವರು ವೀರ್ಯದಾನ ಮಾಡಬೇಕು ಎಂದು ತಮಿಳುನಾಡಿಗೆ ಸೇರಿದ ಮಹಿಳಾ ಕ್ರಿಕೆಟರ್ ಭಾವನ ಸಾಮಾಜಿಕ ಮಾಧ್ಯಮ ಮೂಲಕ ಸಲಹೆ ನೀಡಿದ್ದಾರೆ.

ತನ್ನ ಜೀನ್ಸ್ ಮುಂದುವರಿಯಲು ಹೃತಿಕ್ ಈ ಕೆಲಸ ಮಾಡಬೇಕು ಆಕೆ ಸೂಚಿಸಿದ್ದಾರೆ. ಭಾವನ ಇತ್ತೀಚೆಗೆ ತನ್ನ ಸ್ನೇಹಿತರೊಂದಿಗೆ ’ವಾರ್’ ಚಿತ್ರ ವೀಕ್ಷಿಸಿದರಂತೆ ಸಿನಿಮಾದಲ್ಲಿ ಹೃತಿಕ್ ಅವರ ಸೌಂದರ್ಯ ಕಂಡು ಮರುಳಾಗಿಹೋಗಿದ್ದಾರಂತೆ.

ಕೇವಲ ತಾನು ಮಾತ್ರವಲ್ಲ ತನ್ನಂತೆ ಅನೇಕ ಯುವತಿಯರು ಹೃತಿಕ್‌ರೋಷನ್ ಅವರನ್ನು ನೋಡಿ ಇದೇ ಭಾವನೆ ಹೊಂದಿದ್ದಾರಂತೆ. ಹೃತಿಕ್ ತನ್ನ ಜೀನ್ಸ್ ಮುಂದುವರಿಸಲು ಬಯಸಿದರೆ, ಅವರು ವೀರ್ಯದಾನ ಮಾಡಬೇಕು ಎಂದು ಆಕೆ ಟ್ವೀಟ್ ಮಾಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com