ಟೀಂ ಇಂಡಿಯಾದ ಈ ಸ್ಟಾರ್ ಆಟಗಾರ ಸ್ವಿಂಗ್ ಮಾಂತ್ರಿಕ: ಶೋಯೆಬ್ ಅಖ್ತರ್

ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಟೀಂ ಇಂಡಿಯಾದ ಈ ಸ್ಟಾರ್ ಆಟಗಾರ ಸ್ವಿಂಗ್ ಮಾಂತ್ರಿಕ ಎಂದು ಹೊಗಳಿದ್ದಾರೆ. 
ಶೋಯೆಬ್ ಅಖ್ತರ್
ಶೋಯೆಬ್ ಅಖ್ತರ್

ಮುಂಬೈ: ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಟೀಂ ಇಂಡಿಯಾದ ಈ ಸ್ಟಾರ್ ಆಟಗಾರ ಸ್ವಿಂಗ್ ಮಾಂತ್ರಿಕ ಎಂದು ಹೊಗಳಿದ್ದಾರೆ. 

ಮೊಹಮ್ಮದ್ ಶಮಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೊನೆಯ ದಿನ 5 ವಿಕೆಟ್ ಕಿತ್ತು ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟಿದ್ದರು. ಶಮಿಯನ್ನು ಸ್ವಿಂಗ್ ಬೌಲಿಂಗ್ ಕಿಂಗ್ ಎಂದು ಶೋಯೆಬ್ ಕರೆದಿದ್ದಾರೆ. 

ವಿಶ್ವಕಪ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಸೋಲಿನ ಬಳಿಕ ಅಸಮಾಧಾನಗೊಂಡಿದ್ದ ಶಮಿ ನನಗೆ ಕರೆ ಮಾಡಿದ್ದರು. ಈ ವೇಳೆ ನನ್ನ ಕೈಯಿಂದ ಏನನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು. ಅದಕ್ಕೆ ನಾನು ಸಮಾಧಾನ ಮಾಡಿದ್ದೆ. ಫಿಟ್ ನೆಸ್ ಕಡೆ ಹೆಚ್ಚು ಗಮನ ನೀಡುವಂತೆ ಹೇಳಿದ್ದೆ ಎಂದರು. 

ಶಮಿ ಮಾತ್ರ ಸೀಮ್ ಮತ್ತು ಸ್ವಿಂಗ್ ಬೌಲಿಂಗ್ ಕೌಶಲ್ಯವೊಂದಿರುವ ಬೌಲರ್. ಎದುರಾಳಿ ಬ್ಯಾಟ್ಸ್ ಮನ್ ಗಳನ್ನು ತನ್ನ ವೇಗದ ಬೌಲಿಂಗ್ ನಿಂದ ಔಟ್ ಮಾಡುತ್ತಾರೆ. ನೀನೊಬ್ಬ ಸ್ವಿಂಗ್ ಬೌಲಿಂಗ್ ನ ಕಿಂಗ್ ಎಂದು ಹೇಳಿದ್ದೆ. ಅದನ್ನು ಮಾಡಿ ತೋರಿಸಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com