ರೆಡ್ ಬಾಲ್ ಕ್ರಿಕೆಟ್ನಲ್ಲಿ ರೋ'ಹಿಟ್' ಶರ್ಮಾ ಆರಂಭಿಕನಾಗಿ ಸ್ಫೋಟಿಸಿದರೇ ತಂಡಕ್ಕೆ ಲಾಭ: ವಿರಾಟ್ ಕೊಹ್ಲಿ

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ನಲ್ಲಿ ಟಾಪ್ ಆರ್ಡರ್ ನಲ್ಲಿ ಆಡಲು ಅವಕಾಶ ನೀಡಬೇಕು. ಇದರಿಂದ ಭಾರತಕ್ಕೆ ಮತ್ತಷ್ಟು ಗೆಲುವು ಸಿಗಲಿದೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ

ಪುಣೆ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ನಲ್ಲಿ ಟಾಪ್ ಆರ್ಡರ್ ನಲ್ಲಿ ಆಡಲು ಅವಕಾಶ ನೀಡಬೇಕು. ಇದರಿಂದ ಭಾರತಕ್ಕೆ ಮತ್ತಷ್ಟು ಗೆಲುವು ಸಿಗಲಿದೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ರೋಹಿತ್ ಶರ್ಮಾರಂತಹವರು ಆರಂಭಿಕನಾಗಿ ಕಣಕ್ಕಿಳಿದರೆ ನಾವು ಹೆಚ್ಚಿನ ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸುವ ಸನ್ನಿವೇಶಗಳು ಹೆಚ್ಚಿರುತ್ತವೇ. ಇನ್ನು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ನಲ್ಲಿ ವಿಜೃಂಬಿಸಲು ಇಚ್ಛಿಸುತ್ತಾರೆ ಎಂದು ಹೇಳಿದರು. 

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಎರಡು ಶತಕ ಸಿಡಿಸಿ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ. ಇನ್ನು ಟೀಂ ಇಂಡಿಯಾ ಸಹ ಪಂದ್ಯದಲ್ಲಿ 203 ರನ್ ಗಳಿಂದ ಬೃಹತ್ ಗೆಲುವು ಸಾಧಿಸಲು ನೆರವಾಯಿತು ಎಂದರು. 

2013ರಿಂದ ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ 32 ವರ್ಷದ ರೋಹಿತ್ ಶರ್ಮಾ ತಾನು ಅತ್ಯುತ್ತಮ ಆಟಗಾರನೆಂದು ಗುರುತಿಸಿಕೊಂಡಿದ್ದಾರೆ. ಅದನ್ನೇ ಟೆಸ್ಟ್ ಕ್ರಿಕೆಟ್ ನಲ್ಲಿ ಮಧ್ಯಮ ಕ್ರಮಾಂಕ ಮತ್ತು ಕೆಳ ಕ್ರಮಾಂಕದಲ್ಲಿ ಪುನರಾವರ್ತಿಸಲು ಸಾಧ್ಯವಾಗಿರಲಿಲ್ಲ ಆದರೆ ಆರಂಭಿಕನಾಗಿ ರೋಹಿತ್ ಅದ್ಭುತ ಆಟ ಪ್ರದರ್ಶಿಸಿದ್ದಾರೆ ಎಂದು ಕೊಹ್ಲಿ ರೋಹಿತ್ ರ ಗುಣಗಾನ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com