ಶ್ರೀಲಂಕಾ-ಪಾಕಿಸ್ತಾನ ಪಂದ್ಯದಲ್ಲಿ ಕೊಹ್ಲಿಗೇನು ಕೆಲಸ, ಪಾಕ್ ಅಭಿಮಾನಿಯ ಬೇಡಿಕೆಗೆ ಇಂಟರ್ ನೆಟ್ ಫಿದಾ!

ಲಾಹೋರ್ ನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಒಂದಿಲ್ಲೊಂದು ಕಾರಣದಿಂದ ಸುದ್ದಿಗೆ ಗ್ರಾಸವಾಗುತ್ತಿದ್ದು, ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯಿಂದಾಗಿ ಮತ್ತೆ ಸುದ್ದಿಗೆ ಗ್ರಾಸವಾಗಿದೆ.

Published: 10th October 2019 12:52 AM  |   Last Updated: 10th October 2019 12:52 AM   |  A+A-


Kohli Fan Urges Him To Play In Pakistan

ಕೊಹ್ಲಿಗೆ ಪಾಕ್ ಅಭಿಮಾನಿಯ ಮನವಿ

Posted By : Srinivasamurthy VN
Source : Online Desk

ಲಾಹೋರ್: ಲಾಹೋರ್ ನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಒಂದಿಲ್ಲೊಂದು ಕಾರಣದಿಂದ ಸುದ್ದಿಗೆ ಗ್ರಾಸವಾಗುತ್ತಿದ್ದು, ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯಿಂದಾಗಿ ಮತ್ತೆ ಸುದ್ದಿಗೆ ಗ್ರಾಸವಾಗಿದೆ.

ಅರೆ ಇದೇನಿದು.. ಶ್ರೀಲಂಕಾ-ಪಾಕಿಸ್ತಾನದ ಪಂದ್ಯದಲ್ಲಿ ಭಾರತದ ವಿರಾಟ್ ಕೊಹ್ಲಿಗೇನು ಕೆಲಸ ಎಂದು ಭಾವಿಸಬೇಡಿ.. ಇದಕ್ಕೆ ಕಾರಣ ವಿರಾಟ್ ಕೊಹ್ಲಿಯ ಪಾಕಿಸ್ತಾನದ ಅಭಿಮಾನಿ.. ಹೌದು.. ಲಾಹೋರ್ ನಲ್ಲಿ ನಡೆಯುತ್ತಿರುವ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಕ್ರಿಕೆಟ್ ಅಭಿಮಾನಿಯೊಬ್ಬ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನದಲ್ಲಿ ಬಂದು ಆಡುವಂತೆ ಮನವಿ ಮಾಡಿದ್ದಾರೆ.

'ವಿರಾಟ್ ಕೊಹ್ಲಿ ಪಾಕಿಸ್ತಾನದಲ್ಲಿ ಬಂದು ಕ್ರಿಕೆಟ್ ಆಡುವುದನ್ನು ನಾನು ನಿರೀಕ್ಷಿಸುತ್ತಿದ್ದೇನೆ. ನಾನು ಕೊಹ್ಲಿಯ ಅತಿ ದೊಡ್ಡ ಅಭಿಮಾನಿ ಎಂದು ಬರೆದು ಪ್ರದರ್ಶನ ಮಾಡಿದ್ದಾನೆ. ಕೊಹ್ಲಿಯ ಪಾಕಿಸ್ತಾನ ಅಭಿಮಾನಿಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಉಭಯ ದೇಶದ ಸಂಬಂಧ ಉತ್ತಮವಾದರೆ ಶೀಘ್ರದಲ್ಲೇ ನಿಮ್ಮ ಕನಸುೃ ನನಸಾಗಲಿದೆ ಎಂದು ಹೇಳಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp