2ನೇ ಟೆಸ್ಟ್: 2ನೇ ದಿನದಾಟ ಅಂತ್ಯ, ಮೊದಲ ಇನ್ನಿಂಗ್ಸ್ ಭಾರತ 601/5 ಡಿಕ್ಲೇರ್, ಆಫ್ರಿಕಾ 36/3

ನಾಯಕ ವಿರಾಟ್ ಕೊಹ್ಲಿ ಅಜೇಯ (254) ಹಾಗೂ ರವೀಂದ್ರ ಜಡೇಜಾ (91) ಅವರ ಭರ್ಜರಿ ಆಟದ ನೆರವಿನಿಂದ ಆತಿಥೇಯ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಗೆ 601 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು. ನಂತರ ಇನ್ನಿಂಗ್ಸ್ ಆರಂಭಿಸಿದ ಆಫ್ರಿಕಾ 3 ವಿಕೆಟ್ ನಷ್ಟಕ್ಕೆ 36 ರನ್ ಪೇರಿಸಿದೆ.
ವಿರಾಟ್ ಕೊಹ್ಲಿ-ರವೀಂದ್ರ ಜಡೇಜಾ
ವಿರಾಟ್ ಕೊಹ್ಲಿ-ರವೀಂದ್ರ ಜಡೇಜಾ

ಪುಣೆ: ನಾಯಕ ವಿರಾಟ್ ಕೊಹ್ಲಿ ಅಜೇಯ (254) ಹಾಗೂ ರವೀಂದ್ರ ಜಡೇಜಾ (91) ಅವರ ಭರ್ಜರಿ ಆಟದ ನೆರವಿನಿಂದ ಆತಿಥೇಯ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಗೆ 601 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು. ನಂತರ ಇನ್ನಿಂಗ್ಸ್ ಆರಂಭಿಸಿದ ಆಫ್ರಿಕಾ 3 ವಿಕೆಟ್ ನಷ್ಟಕ್ಕೆ 36 ರನ್ ಪೇರಿಸಿದೆ.
  
ಎರಡನೇ ದಿನವಾದ ಶುಕ್ರವಾರ 3 ವಿಕೆಟ್ ಗೆ 273 ರನ್ ಗಳಿಂದ ಆಟ ಮುಂದುವರಿಸಿದ ಟೀಮ್ ಇಂಡಿಯಾ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿತು. ನಾಲ್ಕನೇ ವಿಕೆಟ್ ಗೆ ಭಾರತ ತಂಡ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಸಮಯೋಚಿತ ಬ್ಯಾಟಿಂಗ್ ನಡೆಸಿದರು. ಈ ಜೋಡಿ ದಕ್ಷಿಣ ಆಫ್ರಿಕಾದ ಬೌಲರ್ ಗಳನ್ನು ಕಾಡಿತು. 
  
ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿದಿ ರಹಾನೆ-ಕೊಹ್ಲಿ ರನ್ ಗುಡ್ಡೆ ಹಾಕಿತು. ಈ ಜೋಡಿ ನಾಲ್ಕನೇ ವಿಕೆಟ್ ಗೆ 343 ಎಸೆತಗಳಲ್ಲಿ 178 ರನ್ ಕಲೆ ಹಾಕಿತು. ರಹಾನೆ 168 ಎಸೆತಗಳಲ್ಲಿ 8 ಬೌಂಡರಿ ಸೇರಿದಂತೆ 59 ರನ್ ಬಾರಿಸಿ ಕೇಶವ್ ಮಹಾರಾಜ್ ಗೆ ವಿಕೆಟ್ ಒಪ್ಪಿಸಿದರು. 
  
4 ವಿಕೆಟ್ ಗೆ 376 ರನ್ ಕಳೆದುಕೊಂಡಿದ್ದ ತಂಡಕ್ಕೆ ಕೊಹ್ಲಿ ಹಾಗೂ ಜಡೇಜಾ ಆಧಾರವಾಗುವು ಸೂಚನೆ ನೀಡಿದರು. ಜಡೇಜಾ ಬ್ಯಾಟಿಂಗ್ ನಲ್ಲಿ ಬಡ್ತಿ ಪಡೆದು ರನ್ ವೇಗಕ್ಕೆ ಚುರುಕು ಮುಟ್ಟಿಸುವ ಕೆಲಸವನ್ನು ಮಾಡಿದರು. ಸೀಮಿತ ಓವರ್ ಗಳಲ್ಲಿ ಬ್ಯಾಟ್ ಮಾಡಿದ ರೀತಿ ಆಡಿದ ಜಡೇಜಾ ಅಬ್ಬರಿಸಿದರು. 
  
ಒಂದು ತುದಿಯಲ್ಲಿ ಜಡೇಜಾ ಆರ್ಭಟ ನಡೆಸಿದರೆ, ಇನ್ನೊಂದು ತುದಿಯಲ್ಲಿ ವಿರಾಟ್ ಕೊಹ್ಲಿ ಮನಮೋಹಕ ಬ್ಯಾಟಿಂಗ್ ನಡೆಸಿದರು. ಈ ಜೋಡಿ 237 ಎಸೆತಗಳಲ್ಲಿ 225 ರನ್ ಸೇರಿಸಿತು. ಜಡೇಜಾ 104 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ನೆರವಿನಿಂದ 91 ರನ್ ಬಾರಿಸಿದರು. 
  
ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದರು. ಇವರು 336 ಎಸೆತಗಳಲ್ಲಿ 33 ಬೌಂಡರಿ, 2 ಸಿಕ್ಸರ್ ನೆರವಿನಿಂದ 254 ರನ್ ಬಾರಿಸಿ ಅಜೇಯರಾಗುಳಿದರು. ದ್ವಿಶತಕ ಸಿಡಿಸಿ ನೂತನ ದಾಖಲೆ ಮಾಡಿದ ವಿರಾಟ್ ಕೊಹ್ಲಿ ಅವರು ಟೆಸ್ಟ್ ವೃತ್ತಿ ಜೀವನದಲ್ಲಿ 7,000 ರನ್ ಪೂರೈಸಿದರು. ಅತಿ ವೇಗವಾಗಿ 7,000 ರನ್ ದಾಖಲಿಸಿದ ವಿಶ್ವದ ನಾಲ್ಕನೇ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು. ಕೊಹ್ಲಿ ಈ ಸಾಧನೆ ಮಾಡಲು 138 ಇನಿಂಗ್ಸ್ ಗಳನ್ನು ತೆಗೆದುಕೊಂಡಿದ್ದಾರೆ, ಗ್ಯಾರಿ ಸೋಬರ್ಸ್ ಹಾಗೂ ಕುಮಾರ ಸಂಗಕ್ಕಾರ ಅವರೊಂದಿಗೆ ಕೊಹ್ಲಿ ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com