ಮೈದಾನದಲ್ಲಿ ಕೆಟ್ಟದಾಗಿ ಬೈದಾಡಿಕೊಂಡ ರಬಾಡ ಮತ್ತು ಡಿ ಕಾಕ್, ವಿಡಿಯೋ ವೈರಲ್!

ಟೀಂ ಇಂಡಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬೌಲರ್ ಕಾಗಿಸೋ ರಬಾಡ ಮತ್ತು ಕ್ವಿಂಟನ್ ಡಿಕಾಕ್ ಮೈದಾನದಲ್ಲೇ ಕೆಟ್ಟದಾಗಿ ಬೈದಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಡಿ ಕಾಕ್-ರಬಾಡ
ಡಿ ಕಾಕ್-ರಬಾಡ

ಟೀಂ ಇಂಡಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬೌಲರ್ ಕಾಗಿಸೋ ರಬಾಡ ಮತ್ತು ಕ್ವಿಂಟನ್ ಡಿಕಾಕ್ ಮೈದಾನದಲ್ಲೇ ಕೆಟ್ಟದಾಗಿ ಬೈದಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನ 123ನೇ ಓವರ್ ನಲ್ಲಿ ಕೊಹ್ಲಿ ಮತ್ತು ಜಡೇಜಾ ಬ್ಯಾಟ್ ಮಾಡುತ್ತಿದ್ದರು. ಈ ವೇಳೆ ರಬಾಡ ಚೆಂಡನ್ನು ಕೀಪರ್ ಡಿಕಾಕ್ ಗೆ ಎಸೆದರು. ಚೆಂಡು ತಲೆ ಮೇಲೆ ಹೋಗಿದ್ದರಿಂದ ಡಿಕಾಕ್ ಚೆಂಡನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಈ ವೇಳೆ ಕ್ರೀಸ್ ನಲ್ಲಿದ್ದ ಕೊಹ್ಲಿ ಸಿಂಗಲ್ ಓಡಿದರು. 

ಇದರಿಂದ ಕೋಪಗೊಂಡ ರಬಾಡ ಡಿಕಾಕ್ ಗೆ ವಾಚ್ ದಿ ... ಬಾಲ್(ಚೆಂಡನ್ನು ಕಣ್ಬಿಟ್ಟು ನೋಡು) ಎಂದು ಬೈದರು. ಇದಕ್ಕೆ ಡಿಕಾಕ್ ಸಹ ಬೈದರು. ಮೈದಾನದಲ್ಲಿ ಕ್ಷಣಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com