ಪುಣೆ ಮೈದಾನದಲ್ಲಿ ಭದ್ರತಾ ಲೋಪ: ಸಿಬ್ಬಂದಿ ವಿರುದ್ಧ ಗವಾಸ್ಕರ್ ಆಕ್ರೋಶ

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಉಂಟಾದ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ.

Published: 13th October 2019 10:20 AM  |   Last Updated: 13th October 2019 10:20 AM   |  A+A-


Security Breach In Pune

ಪುಣೆ ಮೈದಾನದಲ್ಲಿ ಭದ್ರತಾ ಲೋಪ

Posted By : Srinivasamurthy VN
Source : Online Desk

ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಉಂಟಾದ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ.

ಪುಣೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರೋಹಿತ್‌ ಶರ್ಮಾರ ಅಭಿಮಾನಿಯೊಬ್ಬ ಸೀದಾ ಮೈದಾನಕ್ಕೆ ನುಗ್ಗಿ ಅವರ ಕಾಲಿಗೆ ಬಿದ್ದಿದ್ದಾನೆ.  ಭದ್ರತಾ ಸಿಬ್ಬಂದಿಗಳು ಇದ್ದರೂ ಅವರ ಕಣ್ತಪ್ಪಿಸಿ ಫೀಲ್ಡ್​ಗೆ ನುಗ್ಗಿದ ಅಭಿಮಾನಿ ಮಹಾಶಯ, ನೇರವಾಗಿ ಬಂದು ರೋಹಿತ್ ಶರ್ಮಾ​ ಕಾಲಿಗೆ ಬಿದಿದ್ದಾನೆ. ಅಲ್ಲದೆ ಈ ವೇಳೆ ರೋಹಿತ್ ಶರ್ಮಾರನ್ನು ಮೇಲೆತ್ತಲು ಹೋಗಿ ಅವರನ್ನೂ ಕೆಳಗೆ ಬೀಳಿಸಿದ್ದಾನೆ. ಈ ವೇಳೆ ಭದ್ರತಾ ಸಿಬ್ಬಂದಿ ಇದ್ದರಾದರೂ ಭದ್ರತೆಯನ್ನೂ ಮೀರಿ ಆತ ಕ್ರೀಡಾಂಗಣಕ್ಕೆ ಬಂದಿದ್ದು ಇದೀಗ ಈ ವಿಚಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಪಂದ್ಯದ ವೇಳೆ ಕಮೆಂಟರಿ ರೂಂನಲ್ಲಿದ್ದ ಮಾಜಿ ಆಟಗಾರ ಸುನೀಲ್‌ ಗವಾಸ್ಕರ್‌, ಘಟನೆಯನ್ನು ನೋಡುತ್ತಲೇ ಪುಣೆ ಸ್ಟೇಡಿಯಂನಲ್ಲಿ ಕೈಗೊಂಡ ಭದ್ರತೆಯ ವಿರುದ್ಧ ತಿರುಗಿಬಿದ್ದಿದ್ದಾರೆ.  ಕ್ರಿಕೆಟಿಗರ ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಭದ್ರತಾ ಸಿಬ್ಬಂದಿ ಕ್ರಿಕೆಟ್‌ ನೋಡ್ತಿದ್ದಾರಾ ಅಥವಾ ಮೈದಾನದಲ್ಲಿರುವ ಜನಸಂದಣಿ ನೋಡ್ತಿದಾರಾ..? ಇದು ಅಪಾಯಕಾರಿ. ಮೈದಾನಕ್ಕೆ ಯಾರೂ ಹೋಗದಂತೆ ನೋಡಿಕೊಳ್ಳಲು ನೀವೆಲ್ಲಿದ್ದೀರಿ. ಈ ಹಿಂದೆ ಈ ರೀತಿಯ ಘಟನೆಗಳು ಜರುಗಿದ್ದು, ಆಗ ಆಟಗಾರರಿಗೆ ಹಾನಿಯುಂಟಾಗಿದೆ. ವೈ ಟೇಕ್‌ ಎ ಚಾನ್ಸ್‌ ಅಂತಾ ಸುನೀಲ್ ಗವಾಸ್ಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp