ರಣಜಿ ಟ್ರೋಫಿ, ಕ್ರಿಕೆಟಿಗರ ಆರ್ಥಿಕ ಹಿತಾಸಕ್ತಿ ನನ್ನ ಆದ್ಯತೆ: ಸೌರವ್ ಗಂಗೂಲಿ 

ಕ್ರಿಕೆಟ್ ಜಗತ್ತಿನ ಅತಿದೊಡ್ಡ ಸಂಸ್ಥೆ ಬಿಸಿಸಿಐಯ ಉಸ್ತುವಾರಿ ನೋಡಿಕೊಳ್ಳುವುದು ಸವಾಲಿನ ಕೆಲಸ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಒಪ್ಪಿಕೊಂಡಿದ್ದಾರೆ. 
ಸೌರವ್ ಗಂಗೂಲಿ
ಸೌರವ್ ಗಂಗೂಲಿ

ಮುಂಬೈ: ಕ್ರಿಕೆಟ್ ಜಗತ್ತಿನ ಅತಿದೊಡ್ಡ ಸಂಸ್ಥೆ ಬಿಸಿಸಿಐಯ ಉಸ್ತುವಾರಿ ನೋಡಿಕೊಳ್ಳುವುದು ಸವಾಲಿನ ಕೆಲಸ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 


ಮುಂಬೈಯಲ್ಲಿ  ನಿನ್ನೆ ನಡೆದ ಮಂಡಳಿಯ ಸದಸ್ಯರ ಅನೌಪಚಾರಿಕ ಸಭೆಯ ಕೊನೆಗೆ ಮುಂದಿನ ಬಿಸಿಸಿಐ ಅಧ್ಯಕ್ಷ ಹುದ್ದೆಯ ರೇಸ್ ನಲ್ಲಿ ಸೌರವ್ ಗಂಗೂಲಿ ಮುಂಚೂಣಿಯಲ್ಲಿದ್ದಾರೆ ಎಂದು ಪ್ರಕಟಿಸಲಾಯಿತು. ಭಾರತದ ಮಾಜಿ ಬ್ಯಾಟ್ಸ್ ಮೆನ್ ಬ್ರಿಜೇಶ್ ಪಟೇಲ್ ಐಪಿಎಲ್ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳುವ ಸಾಧ್ಯತೆಯಿದೆ. 


''ಬಿಸಿಸಿಐ ಅಧ್ಯಕ್ಷ ಹುದ್ದೆಗೆ ನೇಮಕಗೊಳ್ಳುತ್ತಿರುವುದಕ್ಕೆ ನನಗೆ ಖುಷಿಯಾಗುತ್ತಿದೆ. ಬಿಸಿಸಿಐ ಬಗ್ಗೆ ಟೀಕೆಗಳು ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ನನಗೆ ಏನಾದರೊಂದು ಕೆಲಸ ಮಾಡಲು, ಸಂಸ್ಥೆಯಲ್ಲಿ ಉತ್ತಮ ಬದಲಾವಣೆ ತರಲು ಇದು ಸುಸಂದರ್ಭ'' ಎಂದು ಸೌರವ್ ಗಂಗೂಲಿ ಹೇಳಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.


ನೀವು ಅವಿರೋಧವಾಗಿ ಆಯ್ಕೆಯಾಗುತ್ತೀರೋ ಅಥವಾ ಬೇರೆ ರೀತಿಯಲ್ಲಿ ಆಯ್ಕೆಯಾಗುತ್ತೀರೋ, ಅಧ್ಯಕ್ಷರಾದ ಮೇಲೆ ಇದೊಂದು ದೊಡ್ಡ ಜವಾಬ್ದಾರಿ, ಕ್ರಿಕೆಟ್ ಜಗತ್ತಿನಲ್ಲಿ ಇದು ಅತಿದೊಡ್ಡ ಸಂಸ್ಥೆ. ಭಾರತಕ್ಕೆ ವಿಶೇಷವಾದ ಸ್ಥಾನಮಾನ ಇಲ್ಲಿದೆ, ಈ ಹುದ್ದೆ ಸವಾಲಿನದ್ದು ಎಂದು ಗಂಗೂಲಿ ಹೇಳಿದ್ದಾರೆ.


ನಿನ್ನೆ ಐಪಿಎಲ್ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳುವಂತೆ ಕೂಡ ಸೌರವ್ ಗಂಗೂಲಿಗೆ ಹೇಳಲಾಗಿತ್ತು. ಆದರೆ ಅವರು ಅದನ್ನು ಸಾಯಂಕಾಲ 6 ಗಂಟೆಯ ಹೊತ್ತಿಗೆ ನಿರಾಕರಿಸಿದರು ಎಂಬ ಮಾತುಗಳು ಕೇಳಿಬರುತ್ತಿವೆ. 


ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ವಿವಿಧ ಹುದ್ದೆಗಳನ್ನು ಕಳೆದ 5 ವರ್ಷಗಳಿಂದ ಹೊಂದಿರುವ ಸೌರವ್ ಗಂಗೂಲಿ ಅಲ್ಲಿ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ಬಿಸಿಸಿಐ ಹೊಸ ನಿಯಮ ಪ್ರಕಾರ, ಒಂದು ಸಂಸ್ಥೆಯಲ್ಲಿ 6 ವರ್ಷಗಳ ಕಾಲ ಅಧಿಕಾರದಲ್ಲಿರಬಹುದು. 


ನೂತನ ಅಧ್ಯಕ್ಷನಾದ ಮೇಲೆ ನನ್ನ ಆದ್ಯತೆ ವಿಷಯಗಳತ್ತ ಗಮನ ಹರಿಸಬೇಕು. ಪ್ರಥಮ ದರ್ಜೆಯ ಕ್ರಿಕೆಟರ್ಗಳನ್ನು ಗಮನದಲ್ಲಿಟ್ಟುಕೊಳ್ಳುವುದು, ರಣಿಜಿ ಟ್ರೋಫಿ ಮತ್ತು ಕ್ರಿಕೆಟರ್ ಗಳ ಆರ್ಥಿಕ ಹಿತಾಸಕ್ತಿಯನ್ನು ನೋಡಿಕೊಳ್ಳುವುದು ನನಗೆ ಆದ್ಯತೆಯ ವಿಷಯ ಎಂದು ಗಂಗೂಲಿ ಹೇಳಿದ್ದಾರೆ.

ಪ್ರಸ್ತುತ, ಸಿ ಕೆ ಖನ್ನಾ ಬಿಸಿಸಿಐಯ ಹಂಗಾಮಿ ಅಧ್ಯಕ್ಷರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com