ಕೊಹ್ಲಿ ವಿಶ್ವಕಂಡ ಅತ್ಯುತ್ತಮ ನಾಯಕ: ಪಾಕ್ ಮಾಜಿ ವೇಗಿಯ ಶ್ಲಾಘನೆ

ಭಾರತ ತಂಡ ನಾಯಕ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಎಂದು ಪಾಕಿಸ್ತಾನದ ಮಾಜಿ ವೇಗಿ ಶ್ಲಾಘಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ಜಯದ ಬೆನ್ನಲ್ಲೇ ಯೂಟ್ಯೂಬ್ ನಲ್ಲಿ ರಾವಲ್ ಪಿಂಡಿ ಎಕ್ಸ್ ಪ್ರೆಸ್ ಬಣ್ಣನೆ

ಇಸ್ಲಾಮಾಬಾದ್: ಭಾರತ ತಂಡ ನಾಯಕ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಎಂದು ಪಾಕಿಸ್ತಾನದ ಮಾಜಿ ವೇಗಿ ಶ್ಲಾಘಿಸಿದ್ದಾರೆ.

ಹೌದು.. ಪಾಕಿಸ್ತಾನದ ರಾವಲ್ ಪಿಂಡಿ ಎಕ್ಸ್ ಪ್ರೆಸ್ ಎಂದೇ ಖ್ಯಾತಿ ಗಳಿಸಿರುವ ಮಾಜಿ ವೇಗಿ ಶೊಯೆಬ್ ಅಖ್ತರ್ ವಿರಾಟ್ ಕೊಹ್ಲಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ನ ಶ್ರೇಷ್ಠ ನಾಯಕ ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಜಯಗಳಿಸಿದ ಬಳಿಕ ಈ ಕುರಿತಂತೆ ತಮ್ಮ ಯೂಟ್ಯೂಬ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ಶೊಯೆಬ್ ಅಖ್ತರ್ ಟೀಂ ಇಂಡಿಯಾ ಪ್ರದರ್ಶನವನ್ನು ಮತ್ತು ನಾಯಕ ವಿರಾಟ್ ಕೊಹ್ಲಿ ನಾಯಕತ್ವವನ್ನು ಬಣ್ಣಿಸಿದ್ದಾರೆ. 

'ನಿರೀಕ್ಷೆಯಂತೆಯೇ ದಕ್ಷಿಣ ಆಫ್ರಿಕಾ ವಿರುದ್ಧ ಹಿಂದೂಸ್ತಾನ ಪ್ರಾಬಲ್ಯ ಮೆರೆದಿದ್ದು, ಎರಡನೇ ಟೆಸ್ಟ್ ಪಂದ್ಯದಲ್ಲೂ ಜಯ ಸಾಧಿಸಿದೆ. ಪ್ರಮುಖವಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ವಿಶ್ವಕಪ್ ನಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡಿದ್ದು, ತಂಡದ ಎಲ್ಲ ನ್ಯೂನ್ಯತೆಗಳನ್ನು ಸರಿದೂಗಿಸುತ್ತಿದ್ದಾರೆ. ಪ್ರಮುಖವಾಗಿ ಬ್ಯಾಟಿಂಗ್ ಆರ್ಡರ್ ಸಮಸ್ಯೆಯನ್ನು ಕೊಹ್ಲಿ ಸರಿಪಡಿಸಿದ್ದು, ವಿಶ್ವದ ಶ್ರೇಷ್ಠ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ. ಕೊಹ್ಲಿ ತಮ್ಮ ತಪ್ಪುಗಳನ್ನು ಬೇಗ ಸರಿಪಡಿಸಿಕೊಳ್ಳುತ್ತಿದ್ದು, ತಂಡದ ಕಾಂಬಿನೇಷನ್ ನಲ್ಲಿ ಸಾಕಷ್ಟು ಸುಧಾರಣೆ ತಂದಿದ್ದಾರೆ.

ನಾನು ಕಂಡಂತೆ ವಿಶ್ವ ಕ್ರಿಕೆಟ್ ನಲ್ಲಿ ಇಬ್ಬರು ಶ್ರೇಷ್ಟ ನಾಯಕರಿದ್ದು, ಕೊಹ್ಲಿ ಹೊರತಾಗಿ ನ್ಯೂಜಿಲೆಂಡ್ ಕೇನ್ ವಿಲಿಯಮ್ಸನ್ ರಲ್ಲಿ ನಾನು ಉತ್ತಮ ನಾಯಕತ್ವಗುಣವನ್ನು ಕಂಡಿದ್ದೇನೆ. ಟೆಸ್ಟ್ ಕ್ರಿಕೆಟ್ ಕುರಿತಂತೆ ಮೂಗುಮುರಿಯುತ್ತಿರುವ ಈ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟ್ ಅಲ್ಲಿ ಕೂಡ ರೋಚಕತೆ ಇದೆ ಎಂಬುದನ್ನು ಮತ್ತೆ ಮತ್ತೆ ಕೊಹ್ಲಿ ಮನವರಿಕೆ ಮಾಡಿಕೊಡುತ್ತಿದ್ದಾರೆ. ಆ ಮೂಲಕ ಟೆಸ್ಟ್ ಕ್ರಿಕೆಟ್ ಉಳಿವಿಗೆ ಅವರದೇ ಆದ ರೀತಿಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ. 

ಅಂತೆಯೇ ತಮ್ಮ ವೈಯುಕ್ತಿಕ ದಾಖಲೆಗಾಗಿ ಆಡದೇ ದೇಶ ಮೊದಲು ಎಂಬ ಕೊಹ್ಲಿ ನಿಲುವು ಇತರರಿಗೆ ಸ್ಪೂರ್ತಿಯಾಗಲಿದೆ ಎಂದು ಅಖ್ತರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com