'ಟೀಂ ಇಂಡಿಯಾ ವೇಗಿಗಳ ದಾಳಿ ಹಳೆಯ ವೆಸ್ಟ್ ಇಂಡೀಸ್ ನೆನಪಿಸುತ್ತದೆ'-ಬ್ರಿಯಾನ್ ಲಾರಾ

ಪ್ರಸ್ತುತ ಟೀಂ ಇಂಡಿಯಾದಲ್ಲಿನ ವೇಗಿಗಳ ದಾಳಿಯನ್ನು ವೆಸ್ಟ್ ಇಂಡೀಸ್ ಬ್ಯಾಟಿಂಗ್ ದಂತಕತೆ ಬ್ರಿಯಾನ್ ಲಾರಾ ಪ್ರಶಂಸಿದ್ದಾರೆ.  ಟೀಂ ಇಂಡಿಯಾ ವೇಗಿಗಳ ದಾಳಿ ಹಳೆಯ ವೆಸ್ಟ್ ಇಂಡೀಸ್ ತಂಡದ ದಾಳಿಯನ್ನು ನೆನಪಿಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ:  ಪ್ರಸ್ತುತ ಟೀಂ ಇಂಡಿಯಾದಲ್ಲಿನ ವೇಗಿಗಳ ದಾಳಿಯನ್ನು ವೆಸ್ಟ್ ಇಂಡೀಸ್ ಬ್ಯಾಟಿಂಗ್ ದಂತಕತೆ ಬ್ರಿಯಾನ್ ಲಾರಾ ಪ್ರಶಂಸಿದ್ದಾರೆ.  ಟೀಂ ಇಂಡಿಯಾ ವೇಗಿಗಳ ದಾಳಿ ಹಳೆಯ ವೆಸ್ಟ್ ಇಂಡೀಸ್ ತಂಡದ ದಾಳಿಯನ್ನು ನೆನಪಿಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 ಕಳೆದ ವರ್ಷ ಭಾರತೀಯ ವೇಗಿಗಳಾದ ಜಸ್ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ಟೆಸ್ಟ್  ಪಂದ್ಯಗಳಲ್ಲಿ  142 ವಿಕೆಟ್  ಕಬಳಿಸುವ ಮೂಲಕ ದಾಖಲೆ ಬರೆದಿದ್ದಾರೆ.

ಟೀಂ ಇಂಡಿಯಾದ ವಿಶೇಷತೆ ಕುರಿತು ಪ್ರತಿಕ್ರಿಯಿಸಿರುವ ಲಾರಾ, ಟೀಂ ಇಂಡಿಯಾದ ವೇಗಿಗಳ ದಾಳಿ ನಂಬಲಾರ್ಹವಾಗಿದೆ. ವೆಸ್ಟ್ ಇಂಡೀಸ್ ನಲ್ಲಿ ಆ ದಾಳಿಯನ್ನು ನೋಡಿದ್ದೇನೆ. ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್ , ಭುವನೇಶ್ವರ್ ಕುಮಾರ್ ದಾಳಿ ಅದ್ಬುತವಾಗಿದೆ ಎಂದಿದ್ದಾರೆ.

ಪ್ರಸ್ತುತ ಟೀಂ ಇಂಡಿಯಾದ ವೇಗಿಗಳ ದಾಳಿ 1980 ಹಾಗೂ 1990ರ ದಶಕದಲ್ಲಿನ ವೆಸ್ಟ್ ಇಂಡೀಸ್ ಬೌಲಿಂಗ್ ಸಾಮರ್ಥ್ಯವನ್ನು ನೆನಪಿಸುತ್ತದೆ.  ವೇಗಿಗಳ ದಾಳಿ ಗುಣಮಟ್ಟದಿಂದ ಕೂಡಿದೆ ಎಂದು ಹೇಳಿರುವ ಲಾರಾ, ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅಸಾಧಾರಾಣ ನಾಯಕರಾಗಿದ್ದಾರೆ. ಎಂಎಸ್ ಧೋನಿ ಹಾಕಿದ ಅಡಿಪಾಯನ್ನು ಭದ್ರವಾಗಿ ಕಾಪಾಡಿಕೊಳ್ಳುತ್ತಿದ್ದಾರೆ.  ರೋಹಿತ್ ಶರ್ಮಾ ಎಲ್ಲಾ ಮಾದರಿಯ ಆದ್ಬುತ ಆಟಗಾರರಾಗಿದ್ದಾರೆ ಎಂದು ಬ್ರಿಯಾನ್ ಲಾರಾ ಕೊಂಡಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com