ಭಾರತ - ಬಾಂಗ್ಲಾದೇಶ ಕೋಲ್ಕತಾ ಟೆಸ್ಟ್ ಪಂದ್ಯಕ್ಕೆ ಮೋದಿ - ಶೇಖ್ ಹಸೀನಾಗೆ ಆಹ್ವಾನ

ಯೋಜನೆಯ ಪ್ರಕಾರ ಎಲ್ಲಾ ನಡೆದರೆ ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ನಡೆಯುವ ಭಾರತ - ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯಕ್ಕೆ ಉಭಯ ದೇಶಗಳ ಪ್ರಧಾನಿಗಳು ಸಾಕ್ಷಿಯಾಗಲಿದ್ದಾರೆ.

Published: 17th October 2019 03:27 PM  |   Last Updated: 17th October 2019 07:24 PM   |  A+A-


modi-hasina

ಶೇಖ್ ಹಸೀನಾ - ಮೋದಿ

Posted By : Lingaraj Badiger
Source : PTI

ಕೋಲ್ಕತಾ: ಯೋಜನೆಯ ಪ್ರಕಾರ ಎಲ್ಲಾ ನಡೆದರೆ ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ನಡೆಯುವ ಭಾರತ - ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯಕ್ಕೆ ಉಭಯ ದೇಶಗಳ ಪ್ರಧಾನಿಗಳು ಸಾಕ್ಷಿಯಾಗಲಿದ್ದಾರೆ.

ನವೆಂಬರ್ 22 ರಿಂದ 26ರ ವರೆಗೆ ಭಾರತ - ಬಾಂಗ್ಲಾದೇಶ ನಡುವೆ ಟೆಸ್ಟ್ ಪಂದ್ಯ ಆಯೋಜಿಸಲಾಗಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರಿಗೆ ಆಹ್ವಾನ ನೀಡಲಾಗಿದೆ.

ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆ, ಭಾರತ - ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಉಭಯ ದೇಶಗಳ ಪ್ರಧಾನಿಗಳಿಗೆ ಆಹ್ವಾನ ನೀಡಿದೆ.

ಈ ಹಿಂದೆ 2011ರಲ್ಲಿ ಮೊಹಾಲಿಯಲ್ಲಿ ನಡೆದ ಭಾರತ - ಪಾಕಿಸ್ತಾನ ನಡುವಿನ ವಿಶ್ವಕಪ್ ಸೆಮಿ ಫೈನಲ್ ಪಂದ್ಯಕ್ಕೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಅಂದಿನ ಪಾಕ್ ಪ್ರಧಾನಿ ಯೂಸಫ್ ರಾಜ್ ಗಿಲಾನಿ ಅವರು ಸಾಕ್ಷಿಯಾಗಿದ್ದರು.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp