ಐಪಿಎಲ್ 2020: ಆರ್ ಸಿಬಿಗೆ 'ಮಸಾಜ್ ಥೆರಪಿಸ್ಟ್' ನೇಮಕ

ಮುಂಬರುವ ಐಪಿಎಲ್ 2020ರ ಸರಣಿಗೆ ಸಿದ್ದವಾಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಸಪೋರ್ಟಿಂಗ್ ಕೋಚಿಂಗ್ ಸಿಬ್ಬಂದಿ ನೇಮಕ ಮಾಡಲಾಗಿದೆ.
ಆರ್ ಸಿಬಿ ಮಸಾಜ್ ಥೆರಪಿಸ್ಟ್ ನವನೀತಾ ಗೌತಮ್
ಆರ್ ಸಿಬಿ ಮಸಾಜ್ ಥೆರಪಿಸ್ಟ್ ನವನೀತಾ ಗೌತಮ್

ಬೆಂಗಳೂರು: ಮುಂಬರುವ ಐಪಿಎಲ್ 2020ರ ಸರಣಿಗೆ ಸಿದ್ದವಾಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಸಪೋರ್ಟಿಂಗ್ ಕೋಚಿಂಗ್ ಸಿಬ್ಬಂದಿ ನೇಮಕ ಮಾಡಲಾಗಿದೆ.

ಐಪಿಎಲ್ 2020ಕ್ಕೆ ಸಿದ್ದವಾಗುತ್ತಿರುವ ಆರ್ ಸಿಬಿಗೆ ಆಡಳಿತ ಮಂಡಳಿ ಮಹತ್ತರ ಬದಲಾವಣೆಗೆ ಮುಂದಾಗಿದ್ದು, ಇದರ ಮೊದಲ ಹಂತ ಎಂಬಂತೆ ತಂಡಕ್ಕೆ ಹೊಸ ಸಹಾಯಕ ಕೋಚಿಂಗ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಆರ್ ಸಿಬಿ ತಂಡದ ಮಸಾಜ್ ಥೆರಪಿಸ್ಟ್ ಆಗಿ ನವನಿತಾ ಗೌತಮ್ ಎಂಬವರನ್ನು ನೇಮಕ ಮಾಡಲಾಗಿದೆ. ಆ ಮೂಲಕ ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಮಹಿಳಾ ಬೆಂಬಲ ಸಿಬ್ಬಂದಿಯನ್ನು ನೇಮಿಸಿದ ಮೊದಲ ತಂಡ ಎಂಬ ಕೀರ್ತಿಗೆ ಆರ್​ಸಿಬಿ ಪಾತ್ರವಾಗಿದೆ.

ಆರ್​ಸಿಬಿ ತಂಡ ಮುಖ್ಯ ಫಿಸಿಯೋಥೆರಫಿ ಇವಾನ್ ಸ್ಪೀಚ್ಲಿ ಮತ್ತು ಬಸು ಶಂಕರ್ ಜೊತೆ ನವನೀತ ಅವರು ತಂಡಕ್ಕೆ ಬೇಕಾದ ಮಾರ್ಗದರ್ಶನ, ತಯಾರಿ, ದೈಹಿಕ ಸಮಸ್ಯೆ ಸೇರಿದಂತೆ ಮಸಾಜ್ ಥೆರಫಿಯನ್ನು ನೋಡಿಕೊಳ್ಳಲಿದ್ದಾರೆ ಎಂದು ತಂಡದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಈ ಕುರಿತಂತೆ ಆರ್ ಸಿಬಿ ಕೂಡ ಟ್ವೀಟ್ ಮಾಡಿದ್ದು, ನವನಿತಾ ಗೌತಮ್ ರನ್ನು ಮಸಾಜ್ ಥೆರಪಿಸ್ಟ್ ಆಗಿ ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ. 

13ನೇ ಆವೃತ್ತಿಯ ಐಪಿಎಲ್​​ ಟೂರ್ನಿಗೆ ಈಗಾಗಲೇ ಎಲ್ಲ ತಂಡಗಳು ಭರ್ಜರಿ ಸಿದ್ದತೆಯಲ್ಲಿ ತೊಡಗಿಕೊಂಡಿವೆ. ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com