ವಿರಾಟ್ ಕೊಹ್ಲಿಗೆ ಭದ್ರ ಅಡಿಪಾಯ ಹಾಕಿದ್ದು ಎಂಎಸ್ ಧೋನಿ: ಲಾರಾ

ವೆಸ್ಟ್‌ಇಂಡೀಸ್‌ನ ಮಾಜಿ ಬ್ಯಾಟಿಂಗ್ ದಿಗ್ಗಜ ಬ್ರಿಯಾನ್  ಲಾರಾ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ನಾಯಕತ್ವವನ್ನು ಹಾಡಿ ಹೊಗಳಿದ್ದಾರೆ.
ವಿರಾಟ್ ಕೊಹ್ಲಿ-ಬ್ರಿಯಾನ್ ಲಾರಾ
ವಿರಾಟ್ ಕೊಹ್ಲಿ-ಬ್ರಿಯಾನ್ ಲಾರಾ

ನವದೆಹಲಿ: ವೆಸ್ಟ್‌ಇಂಡೀಸ್‌ನ ಮಾಜಿ ಬ್ಯಾಟಿಂಗ್ ದಿಗ್ಗಜ ಬ್ರಿಯಾನ್  ಲಾರಾ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ನಾಯಕತ್ವವನ್ನು ಹಾಡಿ ಹೊಗಳಿದ್ದಾರೆ. ಆದರೂ ವಿವಿಧ ಆಯಾಮಗಳಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭದ್ರ ಅಡಿಪಾಯ ಹಾಕಿಕೊಟ್ಟರು ಎಂದು ಉಲ್ಲೇಖಿಸಿದರು. 

ಭಾರತೀಯ ಕ್ರಿಕೆಟ್ ಉತ್ತಮ ದಿಶೆಯತ್ತ ಸಾಗುತ್ತಿದೆ. ಧೋನಿ ತಂಡಕ್ಕಾಗಿ ಭದ್ರ ಅಡಿಪಾಯ ಹಾಕಿಕೊಟ್ಟರು. ವಿರಾಟ್ ಕೊಹ್ಲಿ ಮುಂದಕ್ಕೆ ಸಾಗಿಸುತ್ತಿದ್ದಾರೆ ಎಂದು ನುಡಿದರು.

ವಿಶ್ವ ಕ್ರಿಕೆಟ್‌ನಲ್ಲಿ ಸ್ಪರ್ಧೆಯು ಹೆಚ್ಚಾಗಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಎಲ್ಲವೂ ಉತ್ತಮ ತಂಡಗಳು. ಭಾರತವು ಅಧಿಪತ್ಯ ಸ್ಥಾಪಿಸಬೇಕಾದರೆ ದೀರ್ಘ ಸಮಯದ ವರೆಗೂ ಗೆಲುವಿನ ಓಟವನ್ನು ಮುಂದುವರಿಸಬೇಕು ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com