ಭಾರತದ ಪರ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಸಚಿನ್-ಸೆಹ್ವಾಗ್

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಬ್ರಿಯೆನ್ ಲಾರಾ, ವೀರೇಂದ್ರ ಸೆಹ್ವಾಗ್ ಹಾಗೂ ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಗ್ಲೇನ್ ಮೆಗ್ರಾತ್, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ಅವರಂತಹ ಖ್ಯಾತ ನಾಮ ಆಟಗಾರರು ಮುಂದಿನ ವರ್ಷ ಆರಂಭವಾಗಲಿರುವ ರೋಡ್ ಸೆಫ್ಟಿ ಟಿ-20 ಸರಣಿಯಲ್ಲಿ ಅಖಾಡ ಪ್ರವೇಶಿಸಲಿದ್ದಾರೆ.
ಹಿರಿಯ ಕ್ರಿಕೆಟಿಗರು
ಹಿರಿಯ ಕ್ರಿಕೆಟಿಗರು

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಬ್ರಿಯೆನ್ ಲಾರಾ, ವೀರೇಂದ್ರ ಸೆಹ್ವಾಗ್ ಹಾಗೂ ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಗ್ಲೇನ್ ಮೆಗ್ರಾತ್, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ಅವರಂತಹ ಖ್ಯಾತ ನಾಮ ಆಟಗಾರರು ಮುಂದಿನ ವರ್ಷ ಆರಂಭವಾಗಲಿರುವ ರೋಡ್ ಸೆಫ್ಟಿ ಟಿ-20 ಸರಣಿಯಲ್ಲಿ ಅಖಾಡ ಪ್ರವೇಶಿಸಲಿದ್ದಾರೆ.
  
ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ರೋಡ್ ಸೇಫ್ಟಿ ಸೀರೀಸ್ ನಲ್ಲಿ ಹಿರಿಯ ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ಸ್ಟಾರ್ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಪ್ರಚಾರ ರಾಯಭಾರಿ ಆಗಿದ್ದಾರೆ. 
  
ಐದು ತಂಡಗಳ ನಡುವೆ ಈ ಪಂದ್ಯ ನಡೆಯಲಿದ್ದು, ಮುಂದಿನ ವರ್ಷ ಫೆ.16ರಂದು ನಡೆಯಲಿದೆ. ಈ ಪಂದ್ಯಗಳು ದೇಶದ ಪ್ರಮುಖ ನಗರಗಳಲ್ಲಿ ಆಯೋಜಿಸಲಾಗುವುದು. ಭಾರತ ಲೆಜೆಂಡ್ಸ್, ಆಸ್ಟ್ರೇಲಿಯಾ ಲೆಜೆಂಡ್ಸ್, ದಕ್ಷಿಣ ಆಫ್ರಿಕಾ ಲೆಜೆಂಡ್ಸ್, ಶ್ರೀಲಂಕಾ ಲೆಜೆಂಡ್ಸ್, ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡಗಳು ಕಾದಾಟ ನಡೆಸಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com