ಬಿಸಿಸಿಐ ಅಧ್ಯಕ್ಷರಂತೆಯೇ ಕೊಹ್ಲಿ ಜೊತೆಗೆ ಮಾತುಕತೆ- ಸೌರವ್ ಗಂಗೂಲಿ

ಇದೇ ತಿಂಗಳ 24 ರಂದು ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಅಂದೇ ರಾಷ್ಟ್ರೀಯ ಆಯ್ಕೆದಾರರು ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಗೆ ತಂಡವನ್ನು ಆಯ್ಕೆ  ಮಾಡಲಿದ್ದಾರೆ.
ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ
ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ

ಕೊಲ್ಕತ್ತಾ:  ಇದೇ ತಿಂಗಳ 24 ರಂದು ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಅಂದೇ ರಾಷ್ಟ್ರೀಯ ಆಯ್ಕೆದಾರರು ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಗೆ  ತಂಡವನ್ನು ಆಯ್ಕೆ  ಮಾಡಲಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿ ಸಂಬಂಧ ಬಿಸಿಸಿಐ ಅಧ್ಯಕ್ಷರ ರೀತಿಯಲ್ಲಿಯೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆಗೆ ಮಾತುಕತೆ ನಡೆಸುವುದಾಗಿ ಗಂಗೂಲಿ ತಿಳಿಸಿದ್ದಾರೆ.

24 ರಂದು ವಿರಾಟ್ ಕೊಹ್ಲಿಯನ್ನು ಭೇಟಿ ಮಾಡುತ್ತೇನೆ. ಬಿಸಿಸಿಐ ಅಧ್ಯಕ್ಷರಂತೆಯೇ ಟೀಂ ಇಂಡಿಯಾ ನಾಯಕನೊಂದಿಗೆ ಮಾತುಕತೆ ನಡೆಸುತ್ತೇನೆ. ಅವರು ಟೀಂ ಇಂಡಿಯಾದ ನಾಯಕರಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಿಂದಲೂ ವಿರಾಮ ಪಡೆಯದೆ ಆಡುತ್ತಿರುವ ವಿರಾಟ್ ಕೊಹ್ಲಿ, ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಯಿಂದ ಹೊರಗೆ ಉಳಿಯಲಿದ್ದಾರೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ. ಕೆಲ ಹಿರಿಯ ಆಟಗಾರರು ಕೂಡಾ ವಿರಾಮ ಬಯಸಿದ್ದಾರೆ.ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಯ ಮೂರು ಪಂದ್ಯಗಳಿಂದ ಹೊರಗೆ ಉಳಿಯಲು ಕೊಹ್ಲಿ ನಿರ್ಧರಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಗೆ ಆಯ್ಕೆದಾರರು ಗುರುವಾರ ತಂಡವನ್ನು ಪ್ರಕಟಿಸಲಿದ್ದು, ಎಂ. ಎಸ್ ಧೋನಿ ಬಗ್ಗೆಯೂ ಆಯ್ಕೆದಾರರೊಂದಿಗೆ ಮಾತುಕತೆ ನಡೆಸಲು ಅವಕಾಶ ಪಡೆಯುವುದಾಗಿ ಗಂಗೂಲಿ ಹೇಳಿದ್ದಾರೆ. ವಿಶ್ವಕಪ್ ನಂತರ ಎಂಎಸ್ ಧೋನಿ ಯಾವುದೇ ಪಂದ್ಯದಲ್ಲಿಯೂ ಕಾಣಿಸಿಕೊಂಡಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com